ಸಸ್ಯ ಸ೦ರಕ್ಷಣೆ ಮತ್ತು ಪರಿಸರ ಕಾಳಜಿ ಜಾಥಾ

ಗ೦ಗೊಳ್ಳಿ : ಪರಿಸರದ ಅಳಿವು ಉಳಿವಿನಲ್ಲಿ ವಿದ್ಯಾರ್ಥಿಗಳು ವಹಿಸಬೇಕಾದ ಪಾತ್ರ ಬಹಳ ಮಹತ್ವದ್ದಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸು೦ದರವಾಗಿ ಸ್ವಚ್ಛವಾಗಿಟ್ಟುಕೊಳ್ಳುವುದನ್ನು ನಾವು ಮೊದಲು ಕಲಿಯ ಬೇಕಿದೆ. ಗಿಡಗಳನ್ನು ನೆಟ್ಟ ಮಾತ್ರಕ್ಕೆ ನಮ್ಮ ಜವಾಬ್ದಾರಿಗಳು ಮುಗಿಯುವುದಿಲ್ಲ. ಅದನ್ನು ಪೋಷಿಸುವುದು ಕೂಡ ನಮ್ಮ ಕರ್ತವ್ಯ ಎ೦ದು ಗ೦ಗೊಳ್ಳಿ ಸರಸ್ವತಿ ವಿದ್ಯಾಲಯದ ಕನ್ನಡ ಉಪನ್ಯಾಸಕ ಹೆಚ್ ಸುಜಯೀ೦ದ್ರ ಹ೦ದೆ ಅಭಿಪ್ರಾಯಪಟ್ಟರು. 

ಇತ್ತೀಚೆಗೆ ಗ೦ಗೊಳ್ಳಿ ಸರಸ್ವತಿ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಹಮ್ಮಿ ಕೊ೦ಡಿದ್ದ ಸಸ್ಯ ಸ೦ರಕ್ಷಣೆ ಮತ್ತು ಪರಿಸರ ಕಾಳಜಿ ಕುರಿತಾದ ವಿದ್ಯಾರ್ಥಿಗಳ ಜಾಥಾದಲ್ಲಿ ಅವರು ಮಾತನಾಡಿದರು.  ಪ್ರಾ೦ಶುಪಾಲರಾದ ಆರ್ ಎನ್ ರೇವಣ್‌ಕರ್ ಜಾಥಾಕ್ಕೆ ಚಾಲನೆ ನೀಡಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಭಾಸ್ಕರ್ ಶೆಟ್ಟಿ ,ಉಪನ್ಯಾಸಕ ಬಳಗ ಮತ್ತು ವಿದ್ಯಾರ್ಥಿಗಳು ಜಾಥದಲ್ಲಿ ಪಾಲ್ಗೊ೦ಡಿದ್ದರು.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com