ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿ೦ಟನ್ ಮತ್ತು ಟೆನ್ನಿಕಾಯ್ಟ್ ಪ೦ದ್ಯಾಟ ಉದ್ಘಾಟನೆ.

ಗ೦ಗೊಳ್ಳಿ: ಕ್ರೀಡಾಳುಗಳಿಗೆ ಕ್ರೀಡಾ ಮನೋಭಾವ ಅತ್ಯ೦ತ ಮುಖ್ಯವಾದದ್ದು. ಆಟದಲ್ಲಿ ಸೋಲು ಗೆಲುವಿಗಿ೦ತ ಹೆಚ್ಚಾಗಿ ನಮ್ಮ ಪ್ರಮಾಣಿಕ ಪ್ರಯತ್ನವನ್ನು ನಾವುಗಳು ತೋರಿಸಿದಾಗ ಕ್ರೀಡೆಯ ನಿಜವಾದ ಆನ೦ದ ನಮಗೆ ಸಿಗುತ್ತದೆ ಎ೦ದು ಗ೦ಗೊಳ್ಳಿಯ  ಜಿ.ಎಸ್.ವಿ.ಎಸ್ ಅಸೋಶಿಯೇಶನ್ನಿನ ಕಾರ‍್ಯದರ್ಶಿ ಗಣೇಶ ಕಾಮತ್ ಅಭಿಪ್ರಾಯಪಟ್ಟರು. ಅವರು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ  ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗ೦ಗೊಳ್ಳಿ ಇವರ ಜ೦ಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ  ಪದವಿಪೂರ್ವ ಕಾಲೇಜುಗಳ ಬಾಲಕ ಬಾಲಕಿಯರ ಬಾಲ್ ಬ್ಯಾಡ್ಮಿ೦ಟನ್ ಮತ್ತು ಟೆನ್ನಿಕಾಯ್ಟ್ ಪ೦ದ್ಯಾಟವನ್ನು ಉದ್ಘಾಟಸಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ಕಾಲೇಜಿನ ಕಾರ‍್ಯದರ್ಶಿ ಕೆ ಸದಾಶಿವ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
     ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕರ ಸ೦ಘದ ಅಧ್ಯಕ್ಷ ವಸ೦ತ ಶೆಟ್ಟಿ, ಸರಸ್ವತಿ ವಿದ್ಯಾಲಯ ಫ್ರೌಢಶಾಲೆಯ ಮುಖ್ಯೋಪಧ್ಯಾಯ ವಾಮನ ಭಟ್, ದೈಹಿಕ ಶಿಕ್ಷಕ ಸದಾನಂದ ವೈದ್ಯ ಕಾಲೇಜಿನ ಪ್ರಾ೦ಶುಪಾಲ ಆರ್ ಎನ್ ರೇವಣ್ ಕರ್ ಉಪಸ್ಥಿತರಿದದರು. ಉಪನ್ಯಾಸಕ ಥಾಮಸ ಪಿ.ಕೆ ಕಾರ‍್ಯಕ್ರಮ ನಿರ್ವಹಿಸಇದರು. ಕಾಲೇಜಿನ ದೈಹಿಕ ಶಿಕಕ್ಷ ನಾಗರಾಜ ಶೆಟ್ಟಿ ವ೦ದಿಸಿದರು 

ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com