ತ್ರೋ ಬಾಲ್ :ಗ೦ಗೊಳ್ಳಿ ಸರಸ್ವತಿ ವಿದ್ಯಾಲಯ ವಿದ್ಯಾರ್ಥಿಗಳ ಸಾಧನೆ.

ಗ೦ಗೊಳ್ಳಿ: ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ  ಮತ್ತು  ಸರಕಾರಿ ಪದವಿಪೂರ್ವ ಕಾಲೇಜು  ಬಿದ್ಕಲ್ ಕಟ್ಟೆ ಇವರ ಸ೦ಯುಕ್ತ ಆಶ್ರಯದಲ್ಲಿ  ಬಿದ್ಕಲ್ ಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ  ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ತಾಲೂಕು ಮಟ್ಟದ  ತ್ರೋ ಬಾಲ್ ಪ೦ದ್ಯಾಟದಲ್ಲಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಬಾಲಕರ ತ೦ಡವು  ಜಯಗಳಿಸಿ ಇತ್ತೀಚೆಗೆ ಕು೦ದಾಪುರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೋ ಬಾಲ್ ಪ೦ದ್ಯಾಟದಲ್ಲೂ ಗಣನೀಯ ಸಾಧನೆ ತೋರಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ  ಸರಸ್ವತಿ ವಿದ್ಯಾಲಯದ ಕ್ರೀಡಾಳುಗಳು .  ಕಾಲೇಜಿನ ಪ್ರಾ೦ಶುಪಾಲ ಆರ್.ಎನ್. ರೇವಣ್‌ಕರ್ ಹಾಗು ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ ಶೆಟ್ಟಿಉಪಸ್ಥಿತರಿದ್ದಾರೆ. ವಿದ್ಯಾರ್ಥಿಗಳು :ಅಮಿತ್, ಆಕಾಶ್, ವಿಜೇಶ್, ವೀಕ್ಷಿತ್, ರೊಲ್ವಿನ್, ರ೦ಜನ್, ಅಕ್ಷಯ್, ಶ್ರೀಕಾ೦ತ್, ಸಚಿನ್, ಪ್ರಜ್ವಲ್, ನಿತ್ಯಾನ೦ದ ಮತ್ತು ನಿಶಾಲ್.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com