ಚೆನ್ನೈಗೆ ರವಾನೆಯಾಯಿತು ಜೀವಂತ ಹೃದಯ!

ಬೆಂಗಳೂರು: ಮೃತಪಟ್ಟಿದ್ದ ಮಹಿಳೆಯೊಬ್ಬರ ಜೀವಂತ ಹೃದಯವನ್ನು ಚೆನ್ನೈನ ಫೋರ್ಟಿಸ್ ಆಸ್ಪತ್ರೆಗೆ ರವಾನಿಸಿ ವಿಜ್ಞಾನ ಲೋಕಕ್ಕೆ ಸವಾಲೆನಿಸುವಂತ ಸಾಧನೆಯನ್ನು ಬೆಂಗಳೂರು ವೈದ್ಯರು ಮಾಡಿದ್ದಾರೆ.
     ಯಾವುದೇ ವ್ಯಕ್ತಿ ಮೃತಪಟ್ಟ ನಂತರ ಆ ವ್ಯಕ್ತಿಯ ಹೃದಯ 6 ಗಂಟೆಗಳ ಕಾಲ ಜೀವಂತವಿರುತ್ತದೆ. ಅಷ್ಟರೊಳಗೆ ಮತ್ತೊಬ್ಬರಿಗೆ ಹೃದಯವನ್ನು ಜೋಡಿಸಬೇಕಾಗುತ್ತೇ. ಆ ನಿಟ್ಟಿನಲ್ಲಿ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯ ವೈದ್ಯರು ಜೀವಂತ ಹೃದಯವನ್ನು ಚೆನ್ನೈಗೆ ರವಾನಿಸಿದ್ದು, ಇದಕ್ಕಾಗಿ ಗ್ರೀನ್ ಕಾರಿಡಾರ್ ಹೆಸರಿನಲ್ಲಿ ಸಿಗ್ನಲ್ ಫ್ರೀ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
     ಆಂಬ್ಯುಲೇನ್ಸ್‌ನಲ್ಲಿ ಜೀವಂತ ಹೃದಯವನ್ನು ಸಾಗಿಸಾಗುತ್ತಿದ್ದು, ಈ ಆಂಬ್ಯುಲೇನ್ಸ್ ಜೊತೆಗೆ ಬಿಜಿಎಸ್ ಆಸ್ಪತ್ರೆಯ ವೈದ್ಯರು ಹಾಗೂ ಒಂದು ಪೊಲೀಸ್ ವಾಹನ ಸಾಥ್ ನೀಡುತ್ತಿದೆ.
ಮಹಿಳೆಯ ಹೃದಯ ಸದ್ಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿ, 3.30ಕ್ಕೆ ವಿಶೇಷ ವಿಮಾನದ ಮೂಲಕ ಚೆನ್ನೈಗೆ ರವಾನೆಯಾಯಿತು. ಚೆನ್ನೈ ವಿಮಾನ ನಿಲ್ದಾಣದಿಂದ  13 ಕಿ.ಮೀ.ದೂರದಲ್ಲಿರುವ ಪೋರ್ಟಿಸ್ ಆಸ್ಪತ್ರೆಯಲ್ಲಿ ಹೃದಯ ಜೋಡಿಸುವ ಶಸ್ತ್ರ ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿತ್ತು.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯೆಗೊಂಡಿದ್ದ ಬೆಂಗಳೂರು ಮೂಲದ 32 ವರ್ಷದ ಮಹಿಳೆಯ ಹೃದಯವನ್ನು ದಾನ ಮಾಡಲು ಆಕೆಯ ಕುಟುಂಬಸ್ತರು ಸಮ್ಮತಿಸಿದ್ದು, ಆಕೆಯ ಹೃದಯವನ್ನು ಬೇರೊಬ್ಬ ರೋಗಿಗೆ  ಜೋಡಿಸುವ ಕಾರ್ಯಕ್ಕೆ ಬಿಜೆಎಸ್ ಹಾಗು ಫೋರ್ಟಿಸ್ ವೈದ್ಯರಿಂದ ನಡೆದಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com