ಗಿಡ್ಡ ವಧು ಮತ್ತು ವರನ ಅಪರೂಪದ ಮದುವೆ

ಕುಂದಾಪುರ: ಗುರುವಾರ ಇಲ್ಲಿಗೆ ಸಮೀಪದ ಕೋಟೇಶ್ವರದ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಗಿಡ್ಡಗಿರುವ ವಧು ಮತ್ತು ವರನ ವಿವಾಹ ಗಮನ ಸೆಳೆಯಿತು. ಮೂರೂವರೆ ಅಡಿ ಎತ್ತರದ ವರ ಕಾರ್ಕಳದ ಸಂತೋಷ್ ಆಚಾರ್ಯ(32) ಮತ್ತು ಅಷ್ಟೇ ಎತ್ತರದ ವಧು ಕಾಳಾವರ ಪದ್ಮಾವತಿ(27) ಅವರ ವಿವಾಹ ಅಪರೂಪವೆಂಬಂತೆ ನಡೆಯಿತು. 

ವರ ಕಾರ್ಕಳದ ಕುಂಟಾಡಿಯಲ್ಲಿ ಫರ್ನಿಚರ್ಸ್‌ ಕೆಲಸ ಮಾಡಿಕೊಂಡಿದ್ದಾರೆ. ವಧು ಕಾಳಾವರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡಿಕೊಂಡಿದ್ದಾರೆ. ವಿಕಲಚೇತನ ಸಂಘಟನೆಯಲ್ಲಿ ಸಕ್ರಿಯರಾಗಿರುವ ವಧು ಪದ್ಮಾವತಿ ಅವರಿಗೆ ಉಡುಪಿಯಲ್ಲಿ ಸಂತೋಷ್ ಅವರ ಪರಿಚಯ ಆಯಿತು. ಹಿರಿಯರ ಸಮ್ಮುಖ ಮಾತುಕತೆ ನಡೆಯಿತು. ಜಾತಕ ಕೂಡಿಬಂದ ಹಿನ್ನೆಲೆಯಲ್ಲಿ ಹಿರಿಯರ ಒಪ್ಪಿಗೆಯಂತೆ ಗುರುವಾರ ಸತಿ ಪತಿಗಳಾಗಿದ್ದಾರೆ. ಶಾಸ್ತ್ರ ಸಂಪ್ರದಾಯದಂತೆ ನಡೆದ ಈ ವಿವಾಹ ಸಮಾರಂಭದಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಸೇರಿದಂತೆ ಅನೇಕರು ಆಗಮಿಸಿ ಶುಭ ಹಾರೈಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com