ಸಂಭ್ರಮದ ಮೊಂತಿ ಫೆಸ್ತ್ ಆಚರಣೆ

ಕುಂದಾಪುರ: ತಾಲೂಕಿನ ಕ್ರೈಸ್ತ ಭಾಂದವರು ಮೇರಿ ಮಾತೆಯ ಜನ್ಮ ದಿನ ಹಾಗೂ ಹೊಸ ಬೆಳೆಯ ಹಬ್ಬ ಮೊಂತಿ ಫೆಸ್ತ್‌ನ್ನು ವಿವಿಧ ಇಗರ್ಜಿಗಳಲ್ಲಿ ಸೋಮವಾರ ಆಚರಿಸಿ, ಸಂಭ್ರಮಿಸಿದರು. 
     ಭಕ್ತಾದಿಗಳು ಮನೆಗಳಿಂದ ತಂದ ಭತ್ತದ ತೆನೆಯನ್ನು ಮೆರವಣಿಗೆಯಲ್ಲಿ ಇಗರ್ಜಿಗಳಿಗೆ  ಕೊಂಡೊಯ್ಯಲಾಯಿತು. ಮಕ್ಕಳು ದಾರಿಯುದ್ದಕ್ಕೂ ಹೂವುಗಳನ್ನು ಚೆಲ್ಲಿದರು, ಧರ್ಮಗುರುಗಳಿಂದ ಪ್ರಾರ್ಥನೆ, ಪೂಜೆ ಬಳಿಕ ತೆನೆ ಹಂಚಲಾಯಿತು. ಸಸ್ಯಾಹಾರದೊಂದಿಗೆ ಪಾಯಸ ಸಹಿತ ಹೊಸ್ತು ಊಟವೂ ಕ್ರೈಸ್ತರ ಮನೆಗಳಲ್ಲಿ ವಿಶೇಷವಾಗಿತ್ತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com