ರಾಷ್ಟ್ರ ಮಟ್ಟದ ಅಂಚೆ ಚೀಟಿ ವಿನ್ಯಾಸ ಸ್ಪರ್ಧೆ

ಉಡುಪಿ: ಅಂಚೆ ಇಲಾಖೆ ಪ್ರಧಾನಮಂತ್ರಿಯವರ ನಿರ್ದೇಶನದ ಮೇರೆಗೆ ಗಣತಂತ್ರ ದಿನದ ಅಂಗವಾಗಿ ರಾಷ್ಟ್ರ ಮಟ್ಟದ ಅಂಚೆ ಚೀಟಿ ವಿನ್ಯಾಸ ಸ್ಪರ್ಧೆಯನ್ನು (ವಿಷಯ- ಸ್ವತ್ಛ ಭಾರತ) ಏರ್ಪಡಿಸಲಾಗಿದೆ.

ವಿಜೇತ ವಿನ್ಯಾಸಗಳು ಅಂಚೆ ಚೀಟಿ ಮುದ್ರಿಸಲು ಉಪಯೋಗಿಸಲ್ಪಡುವುದು. ಪ್ರಥಮ ಮೂರು ಸ್ಥಾನಗಳಿಗೆ 10,000 ರೂ., 6,000 ರೂ., 4,000 ರೂ. ಬಹುಮಾನ ನೀಡಲಾಗುವುದು.

ಇಂಕ್‌, ವಾಟರ್‌ ಕಲರ್‌, ಆಯಿಲ್‌ ಕಲರ್‌ ಅಥವಾ ಯಾವುದೇ ಮಾಧ್ಯಮ ಬಳಸಬಹುದು. ಕಂಪ್ಯೂಟರ್‌ ವಿನ್ಯಾಸಗಳಿಗೆ ಅವಕಾಶ ಇಲ್ಲ. ಡ್ರಾಯಿಂಗ್‌ ಪೇಪರ್‌, ಆರ್ಟ್‌ ಪೇಪರ್‌ ಅಥವಾ ಇನ್ಯಾವುದೇ ಪೇಪರನ್ನು ಎ-4 ಗಾತ್ರದಲ್ಲಿ ಬಳಸಬಹುದು. ವಿನ್ಯಾಸದ ಹಿಂಬದಿ ಹೆಸರು, ಪ್ರಾಯ, ಮನೆಯ ಪೂರ್ಣ ವಿಳಾಸ, ಪಿನ್‌ ಕೋಡ್‌ ನಂಬರ್‌ನೊಂದಿಗೆ ದೂರವಾಣಿ/ ಇಮೇಲ್‌ ಐಡಿ ಬರೆದು ADG (philately), Room No.108 (B), Dak Bhavan, Parliament Street, New Delhi  - 110001 ವಿಳಾಸಕ್ಕೆಅ. 30ರ ಒಳಗೆ ತಲುಪುವಂತೆ ಕಳುಹಿಸಿಕೊಡಬಹುದಾಗಿದೆ ಎಂದು ಅಂಚೆ ಇಲಾಖೆ ಪ್ರಕಟನೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com