ಬ್ರಹ್ಮಾವರ: ಬ್ರಹ್ಮಾವರ ಸ್ಪೋಟ್ಸ್ ಕ್ಲಬ್ ಮತ್ತು ಕರ್ನಾಟಕ ರಾಜ್ಯ ವೇಟ್ ಲಿಫ್ಟ್ರ್ ಅಸೋಶಿಯೇಶನ್ ಬೆಂಗಳೂರು ವತಿಯಿಂದ ಪುರುಷರ 43ನೇ, ಮಹಿಳೆಯರ 27ನೇ ರಾಜ್ಯ ಮಟ್ಟದ ಕೆ.ಎಸ್.ಎನ್ ಅಡಿಗ ಸ್ಮಾರಕ ವೇಟ್ಲಿಫ್ಟ್ ಸ್ಪರ್ಧೆ ಬ್ರಹ್ಮಾವರದ ಮದರ್ ಪ್ಯಾಲೆಸ್ ಆಡಿಟೋರಿಯಂನಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು. ಮಂಗಳೂರು ಫಾದರ್ ಮುಲ್ಲರ್ಮೆಡಿಕಲ್ ಕಾಲೇಜಿನ ಡಾ.ಕೆ.ರಘುವೀರ ಅಡಿಗ ಉದ್ಘಾಟಿಸಿದರು.
ರಾಜ್ಯ ವೇಟ್ ಲಿಫ್ಟ್ರ್ ಅಸೋಶಿಯೇಶನ್ ಕಾರ್ಯದರ್ಶಿ ಚಂದ್ರಹಾಸ ರೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಾಮನ್ ವೆಲ್ತ್ನಲ್ಲಿ ಚಿನ್ನದ ಪದಕಪಡೆದ ಪುಷ್ಪರಾಜ ಹೆಗ್ಡೆ,ಬ್ರಹ್ಮಾವರ ಸ್ಪೋಟ್ಸ್ ಕ್ಲಬ್ನ ಗ್ರೇಗರಿ ಡಿಸಿಲ್ವ ಉಪಸ್ಥಿತರಿದ್ದರು. ಬ್ರಹ್ಮಾವರ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಭರತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.
ಅಂತಾರಾಷ್ಟ್ರೀಯ ವೇಟ್ಲಿಫ್ಟರ್ ಅರ್ಥರ್ ಡಿಸೋಜ ಪ್ರಾಸ್ತಾವಿಕ ಮಾತನ್ನಾಡಿದರು. ಕ್ರೀಡಾ ಸಂಯೋಜಕ ಚಂದ್ರ ಶೇಖರ ಹೆಗ್ಡೆ ವಂದಿಸಿದರು. ರೋಶನನ್ ಕುಮಾರ್ ಶೆಟ್ಟಿ ನಿರೂಪಿಸಿದರು. ರಾಜ್ಯದ ನಾನಾ ಭಾಗದ 122 ಯುವಕರು, 73 ಭಾಗವಹಿಸಿದ್ದು, ನಾನಾ ಭಾಗದ ತೀರ್ಪುಗಾರರಿಂದ 8 ವಿಭಾಗದಲ್ಲಿ ಸ್ಪರ್ಧೆ ಜರುಗಿತು.
0 comments:
Post a Comment