6ನೇ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ

ಮಂಗಳೂರು: ಮಾಂಡ್‌ ಸೊಭಾಣ್‌ 6ನೇ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರಕ್ಕೆ ಅರ್ಜಿ - ಶಿಫಾರಸುಗಳನ್ನು ಆಹ್ವಾನಿಸಿದೆ.
   ಶ್ರೇಷ್ಠ ಗಾಯಕಿ-2013, ಶ್ರೇಷ್ಠ ಗಾಯಕ-2013, ಶ್ರೇಷ್ಠ ಹಾಡು ಬರಹಗಾರ-2013, ಶ್ರೇಷ್ಠ ಸಂಗೀತ ರಚನಕಾರ-2013, ಶ್ರೇಷ್ಠ ಸಂಗೀತ ಸಂಯೋಜಕ-2013, ಶ್ರೇಷ್ಠ ಸಂಗೀತ ಆಲ್ಬಮ್‌-2013 ವಿಭಾಗಗಳಲ್ಲಿ ಪುರಸ್ಕಾರ ನೀಡಲಾಗುವುದು.
   2013ನೇ ವರ್ಷದಲ್ಲಿ, ಜಗತ್ತಿನ ಯಾವುದೇ ಪ್ರದೇಶದಲ್ಲಿ, ಕೊಂಕಣಿಯ ಯಾವುದೇ ಬೋಲಿಯ, ಯಾವುದೇ ಜಾತಿ-ಧರ್ಮದ ಜನರು ಮಾರಾಟಕ್ಕಾಗಿ ಬಿಡುಗಡೆ ಮಾಡಿದ ಕೊಂಕಣಿ ಹಾಡುಗಳ ಆಲ್ಬಮ್‌, ಈ ಪುರಸ್ಕಾರಕ್ಕೆ ಅರ್ಹತೆ ಪಡೆಯುತ್ತದೆ. ಪ್ರತಿಯೊಂದು ಪುರಸ್ಕಾರವು 25,000 ರೂ. ನಗದು, ಬಿರುದು, ಫಲಕ ಹಾಗೂ ಸನ್ಮಾನ ಒಳಗೊಂಡಿದೆ.
  ನಿಯಮಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಕಲಾಂಗಣ್‌, ಮಂಗಳೂರು ವಿಳಾಸವನ್ನು ಸಂಪರ್ಕಿಸಬಹುದು. ಅರ್ಜಿ- ಶಿಫಾರಸುಗಳು ತಲುಪಲು 2014ರ ಸೆ. 30 ಕೊನೆಯ ದಿನಾಂಕವಾಗಿರುತ್ತದೆ. ಪುರಸ್ಕಾರ ಪ್ರದಾನ ಕಾರ್ಯಕ್ರಮ ಡಿ. 21ರಂದು ಕಲಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com