ದುಶ್ಚಟಗಳಿಂದ ಬದುಕಿನ ನೆಮ್ಮದಿ ನಾಶ

ಬೈಂದೂರು: ‘ಜನರು ಅನುಭವಿಸುವ ಮಾನಸಿಕ ದೌರ್ಬಲ್ಯ, ಸಂಘದೋಷ, ವಿವಿಧ ಸ್ವರೂಪದ ಬಿಕ್ಕಟ್ಟುಗಳು ಜನರು ಮಾದಕದ್ರವ್ಯ ವ್ಯಸನಿಗಳಾಗಲು ಕಾರಣ.

ಹೆಚ್ಚಾಗುತ್ತಿರುವ ಮದ್ಯದಂಗಡಿಗಳು ಅದಕ್ಕೆ ಪ್ರಚೋದನೆ ನೀಡುತ್ತಿವೆ. ದುಶ್ಚಟ ಗಳಿಂದ ಬದುಕಿನ ನೆಮ್ಮದಿ ಕೆಡುವು ದರಿಂದ ವ್ಯಸನಿಗಳನ್ನು ಅದರಿಂದ ವಿಮು ಖಗೊಳಿಸುವುದು ಅಗತ್ಯ’ ಎಂದು ಕುಂದಾ ಪುರ ತಾಲ್ಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕರ್ನಾಟಕ ಜನಜಾಗೃತಿ ವೇದಿಕೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ವಲಯ ಜನಜಾಗೃತಿ ವೇದಿಕೆ, ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ, ರೈತ ಸಂಘ, ಲಯನ್ಸ್‌ ಕ್ಲಬ್, ಹಿರಿಯ ನಾಗರಿಕರ ವೇದಿಕೆ, ವಿವಿಧ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಇಲ್ಲಿನ ಜೆಎನ್‌ಆರ್ ಕಲಾಮಂದಿರದಲ್ಲಿ ಆರಂಭವಾದ ಯೋಜನೆಯ 729ನೇ ಮದ್ಯವರ್ಜನಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯಡ್ತರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಶೆಟ್ಟಿ, ಸದಸ್ಯ ಹೆರಿಯ ದೇವಾಡಿಗ, ತಾಲ್ಲೂಕು ಯೋಜನಾ ಧಿಕಾರಿ ಅಮರಪ್ರಸಾದ ಶೆಟ್ಟಿ, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಬಿ. ಜಗನ್ನಾಥ ಶೆಟ್ಟಿ, ಸಹಕಾರಿ ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ, ಉದ್ಯಮಿ ಶೇಷಯ್ಯ, ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ  ಶ್ರೀನಿವಾಸ ಮದ್ದೋಡಿ, ಆರೋಗ್ಯಾ ಧಿಕಾರಿ ಚಿತ್ರಾ, ಶಿಬಿರಾಧಿಕಾರಿ ನಾಗೇಶ ಇದ್ದರು. ಲೆಕ್ಕ ಪರಿಶೋಧಕ ಭೋಜ ಸ್ವಾಗತಿಸಿ, ಶಿರೂರು ಸೇವಾ ಪ್ರತಿನಿಧಿ ಪವಿತ್ರಾ ವಂದಿಸಿದರು. ಮೇಲ್ವಿಚಾರಕ ವಿಜಯಕುಮಾರ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com