ಹುಡುಗಿಯರೇ ಮೊದಲು ಪ್ರಪೋಸ್‌ ಮಾಡಬೇಕಂತೆ!

ಪ್ರೀತಿ ವಿಚಾರಕ್ಕೆ ಬಂದಾಗಲೆಲ್ಲ, ಹುಡುಗರೇ ಜಿದ್ದಿಗೆ ಬಿದ್ದಂತೆ ಪ್ರಪೋಸ್‌ ಮಾಡುವುದು ಇದ್ದಿದ್ದೇ. ಯಾವತ್ತೂ ಹುಡುಗರೇ ಪ್ರೊಪೋಸ್‌ ಮಾಡೋದೇ ಹೆಚ್ಚು ಎನ್ನುವುದು ಗೊತ್ತಿರುವುದೇ. ಆದರೆ ಈ ವಿಚಾರದಲ್ಲಿ ಭಾರತೀಯ ಹುಡುಗರ ಮನಸ್ಸು ಸ್ವಲ್ಪ ಬದಲಾಗಿದೆ. ಹುಡುಗಿಯರೇ ಮೊದಲು ಪ್ರಪೋಸ್‌ ಮಾಡಬೇಕು ಎಂದು ಅವರು ಆಶಿಸಿದ್ದಾರೆ.ಮ್ಯಾಟ್ರಿಮೋನಿ ವೆಬ್‌ಸೈಟ್‌ ಶಾದಿ ನಡೆಸಿರುವ ಈ ಸಮೀಕ್ಷೆಯಲ್ಲಿ 25ರಿಂದ 36ರ ವಯೋಮಾನದ 6500 ಮಂದಿ ಭಾಗಿಯಾಗಿದ್ದು, ಹುಡುಗಿಯರೇ ಐ ಲವ್‌ ಯೂ ಮೊದಲು ಹೇಳಬೇಕು ಎಂದು ಹೇಳಿದ್ದಾರೆ. 

ಶೇ.71.7ರಷ್ಟು ಮಂದಿ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕಾಲ ಬದಲಾಗಿದೆ. ಹುಡುಗಿಯರೂ ಸಾಕಷ್ಟು ಮುಂದುವರಿದಿದ್ದು, ಅವರೇ ಮುಂದುವರಿಯಲಿ ಎಂದು ಹೇಳಿದ್ದಾರೆ. ಅಲ್ಲದೇ ಶೇ.36ರಷ್ಟು ಮಂದಿ ಹುಡುಗಿಯರೇ ಪ್ರೀತಿಯಲ್ಲಿ ಮುಂದುವರಿಯುವುದು ಕಷ್ಟ ಕಣ್ರೀ... ಎಂದು ಸಂಶಯವನ್ನೂ ವ್ಯಕ್ತಪಡಿಸಿದ್ದಾರಂತೆ. ಮದುವೆ ವಿಷಯಕ್ಕೆ ಬಂದಾಗ ಹುಡುಗರೇ ಮೊದಲು ಮುಂದುವರಿಯಬೇಕೆಂಬ ವಿಷಯ ಸಾಮಾನ್ಯವಾಗಿದ್ದರೂ, ಹುಡುಗಿಯರೇ ಮೊದಲು ಪ್ರೊಪೋಸ್‌ ಮಾಡಬಹುದು ಎಂಬ ಆಶಯ ಹುಡುಗರದ್ದಾಗಿದೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com