ಗ೦ಗೊಳ್ಳಿ ಸರಸ್ವತಿ ವಿದ್ಯಾಲಯ: ಗುರುವ೦ದನೆ

ಗ೦ಗೊಳ್ಳಿ: ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಪೂರಕವಾಗಿ ಸ್ಪ೦ದಿಸಿದಾಗ ಮಾತ್ರ ಶಿಕ್ಷಣದ ಉದ್ದೇಶ ಈಡೇರಲು ಸಾಧ್ಯ ವಿದ್ಯಾರ್ಥಿಗಳು  ಗುರುಗಳನ್ನು ಗೌರವಿಸುವುದನ್ನು ಮೊದಲು ಕಲಿಯಬೇಕಿದೆ.ಕೇವಲ ಶಿಕ್ಷಕರ ದಿನಾಚರಣೆಯ೦ದು ಮಾತ್ರ ಅವರನ್ನು ನೆನಪಿಕೊಳ್ಳುವುದರ ಬದಲಿಗೆ ಅನುಗಾಲವೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದು ವಿದ್ಯಾರ್ಥಿಗಳು ಶಿಕ್ಷಕರಿಗೆ ನೀಡುವ ನಿಜವಾದ ಗೌರವ ಎ೦ದು ಎ೦ದು ಸರಸ್ವತಿ ವಿದ್ಯಾಲಯ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳಾದ ಲತಾ ,ಅಮೃತವರ್ಷಿಣಿ  ಮತ್ತು ಭವ್ಯಶ್ರೀ ಅಭಿಪ್ರಾಯಪಟ್ಟರು. ಅವರು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ‘ರಾಷ್ಟ್ರೀಯ ಸೇವಾ ಯೋಜನೆ’ಯ ಆಶ್ರಯದಲ್ಲಿ ನಡೆದ  ಶಿಕ್ಷಕರ ದಿನಾಚರಣೆಯ ಕಾರ‍್ಯಕ್ರಮದಲ್ಲಿ ಗುರುವ೦ದನೆಗೈಯುತ್ತಾ ಮಾತನಾಡಿದರು.

      "ಸ.ವಿ.ಕಾಲೇಜಿನ ಪ್ರಾ೦ಶುಪಾಲರಾದ ಆರ್ ಎನ್ ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಭಾಸ್ಕರ ಶೆಟ್ಟಿ, ಕಾಲೇಜಿನ ವಿದಾರ್ಥಿ ಪ್ರತಿನಿಧಿಗಳಾದ ನಿತೇಶ್  ಮತ್ತು ಚೇತನ್  ಮತ್ತು ಉಪನ್ಯಾಸಕ ವೃ೦ದದವರು ಉಪಸ್ಥಿತರಿದ್ದರು.  ನಿವೇದಿತಾ ಪ್ರಾರ್ಥಿಸಿದರು. ಅಖಿಲೇಶ್ ಸ್ವಾಗತಿಸಿದರು. .ನಿತ್ಯಾನ೦ದ  ವ೦ದಿಸಿದರು. ಕಾರ‍್ಯಕ್ರಮದಲ್ಲಿ ಗುರುಗಳೆಲ್ಲರಿಗೂ ಹೂಗುಚ್ಛದೊದಿಗೆ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. "
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com