ಸೆ. 17: ಶ್ರೀಕೃಷ್ಣ ಜನ್ಮಾಷ್ಟಮಿ

ಉಡುಪಿ: ಶ್ರೀಕೃಷ್ಣ ಮಠ, ಉಡುಪಿ ಪರ್ಯಾಯ ಶ್ರೀ ಕಾಣಿಯೂರು ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀಕೃಷ್ಣ ಲೀಲೋತ್ಸವದ (ವಿಟ್ಲಪಿಂಡಿ) ಅಷ್ಟದಿನಗಳ ಸಾಂಸ್ಕೃತಿಕ ಕಾರ್ಯಕ್ರಮವು ಸೆ. 11ರಂದು ಪ್ರಾರಂಭಗೊಳ್ಳಲಿದೆ.

ಸೆ. 17ರಂದು ವಿಟ್ಲಪಿಂಡಿ ಕಾರ್ಯಕ್ರಮ ನಡೆಯಲಿದೆ ಎಂದು ಪರ್ಯಾಯ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸೆ. 11ರ ಸಂಜೆ 5.30ಕ್ಕೆ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಸೆ. 16-ಅಷ್ಟಮಿ ಪ್ರಯುಕ್ತ ಉಪವಾಸ ಆಚರಣೆ, ದೇವರಿಗೆ ವಿಶೇಷಾಲಂಕಾರ, ರಾತ್ರಿ 12.36ಕ್ಕೆ ಚಂದ್ರೋದಯವಾಗುವ ಸಂದರ್ಭ ಶ್ರೀ ಕೃಷ್ಣಾಘÂì ಪ್ರದಾನ ನಡೆಯಲಿದೆ. ಸೆ. 17ರ ಬೆಳಗ್ಗೆ ಕನಕಮೂರ್ತಿಗೆ ಬೆಳ್ಳಿಯ ಕವಚ ಸಮರ್ಪಣೆಗೊಳ್ಳಲಿದೆ. ಉಡುಪಿ ಸಂಸ್ಕೃತ ಕಾಲೇಜು ಬಳಿಯಿಂದ ಕವಚವನ್ನು ಮೆರವಣಿಗೆಯಲ್ಲಿ ತಂದು ಅರ್ಪಿಸಲಾಗುವುದು.

ಸಮಾರೋಪ

ಸೆ. 18ರ ಸಂಜೆ ನಡೆಯುವ ಸಮಾರೋಪದಲ್ಲಿ ಶ್ರೀ ಶೀರೂರು ಲಕ್ಷ್ಮೀವರತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಚಕ್ಕುಲಿ ಮತ್ತು ಉಂಡೆಯನ್ನು ಪ್ಯಾಕ್‌ ಮಾಡಿ ಭಕ್ತರಿಗೆ ಹಂಚಲಾಗುವುದು. ಚಿಣ್ಣರ ಸಂತರ್ಪಣೆ ಶಾಲೆಯಲ್ಲಿ ನಡೆದ ಮುದ್ದುಕೃಷ್ಣ ವೇಷ ಸ್ಪರ್ಧೆಯ ವಿಜೇತ ಮಕ್ಕಳಿಗೆ ಸೆ. 20ರಂದು ರಾಜಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಕಾಣಿಯೂರು ಶ್ರೀಗಳು ಹೇಳಿದರು.

ಸ್ಪರ್ಧೆಗಳು

ಶ್ರೀಕೃಷ್ಣ ಮಠದಲ್ಲಿ ಸೆ. 14ರಂದು ಗೀತಾ ಕಂಠಪಾಠ, ಕೃಷ್ಣನ ಕಥೆ ಹೇಳುವುದು, ಸಂಗೀತ, ಕೃಷ್ಣನ ಹಾಡು, ರಂಗೋಲಿ, ಹೂ ಕಟ್ಟುವಿಕೆ, ಮೊಸರು ಕಡೆಯುವಿಕೆ ಮತ್ತು ಕೃಷ್ಣ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸೆ. 16ರಂದು ಬೆಳಗ್ಗೆ 9ಕ್ಕೆ ಮುದ್ದು ಕೃಷ್ಣ ವೇಷ (2 ವರ್ಷದೊಳಗೆ, 2-5 ವರ್ಷ, 5-10 ವಷ) ಮತ್ತು ರಂಗೋಲಿ ಸ್ಪರ್ಧೆಯು ಕೃಷ್ಣ ಮಠದಲ್ಲಿ ಜರಗಲಿದೆ. ಕೃಷ್ಣಾಷ್ಟಮಿ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ಕೃಷ್ಣ ಮಠದ ಬಡಗುಮಾಳಿಗೆಯಲ್ಲಿರುವ ಕಚೇರಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು.

ಸೆ, 17ರ ಮಧ್ಯಾಹ್ನ 2 ಗಂಟೆಯ ಅನಂತರ ಹುಲಿ ವೇಷ ಮತ್ತು ಜನಪದ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸೆ. 16, 17ರಂದು ಪರ್ಯಾಯ ಶ್ರೀ ಕಾಣಿಯೂರು ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಪ್ರಸ್‌ ಫೊಟೋಗ್ರಾಫ‌ರ್‌ ಅಸೋಸಿಯೇಶನ್‌ (ಉಪ್ಪಾ) ಪ್ರಸ್ತುತ ಪಡಿಸುವ ರಾಜ್ಯಮಟ್ಟದ ಟ್ಯಾಮ್ರಾನ್‌ ಕಲರ್ಸ್‌ ಆಫ್ ಶ್ರೀಕೃಷ್ಣ ಛಾಯಾಚಿತ್ರ ಸ್ಪರ್ಧೆ ನಡೆಯಲಿದೆ ಎಂದು ಶ್ರೀಗಳು ವಿವರಿಸಿದರು.

'ಮಡಕೆ ಒಡೆಯಲು ಮಹಿಳೆಯರು'

ಮೊಸರು ಕುಡಿಕೆಯ ವಿಶೇಷ ಆಕರ್ಷಣೆಯಾಗಿ ಮುಂಬಯಿಯ ಸೂರ್ಯೋದಯ ಕ್ರೀಡಾ ಮಂಡಳಿಯ ಮಹಿಳೆಯರು ಹಾಗೂ ಪುರುಷರ ಅಲಾರೆ ಗೋವಿಂದ ತಂಡದಿಂದ ಮಾನವ ಪಿರಮಿಡ್‌ ರಚಿಸಿ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮವು ಕೃಷ್ಣಮಠದ ರಥಬೀದಿಯ ಮೂರು ಸ್ಥಳಗಳಲ್ಲಿ ಸೆ. 17ರ ಅಪರಾಹ್ನ 2.30ಕ್ಕೆ ಮಧುಸೂದನ್‌ ಪೂಜಾರಿ ಕೆಮ್ಮಣ್ಣು ಅವರ ನೇತೃತ್ವದಲ್ಲಿ ನಡೆಯಲಿದೆ ಎಂದರು ಶ್ರೀಗಳು.

ದಿವಾನ ರಘುಪತಿ ಆಚಾರ್ಯ, ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ರಾಧಾಕೃಷ್ಣ ಆಚಾರ್ಯ, ಮಧುಸೂದನ್‌ ಕೆಮ್ಮಣ್ಣು ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com