ಯುವ ವಾಲಿಬಾಲ್ ಆಟಗಾರ ರಾಯ್ಸನ್ ಬೆನಟ್ ಗೆ ಹುಟ್ಟೂರಿನಲ್ಲಿ ಸ್ವಾಗತ

ಹೆಮ್ಮಾಡಿ: ಶ್ರೀಲಂಕಾದ ಕೊಲೊಂ ಬೊದಲ್ಲಿ ಜರುಗಿದ ಯೂತ್ ಏಷ್ಯಾನ್ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಹುಟ್ಟೂರಿಗೆ ಆಗಮಿಸಿದ ಭಾರತೀಯ ಯುವ ವಾಲಿಬಾಲ್ ತಂಡದ ಸದಸ್ಯ ಹೆಮ್ಮಾಡಿ ಮೂವತ್ತು ಮುಡಿಯ ರಾಯ್ಸನ್ ಬೆನಟ್ ರೆಬೆಲ್ಲೊಗೆ ಶನಿವಾರ ಸಂಜೆ ಹುಟ್ಟೂರಿನ ನಾಗರಿಕರು ಭವ್ಯ ಸ್ವಾಗತ ಕೋರಿದರು.
   ಭೋನಿಪಸ್ ರೆಬೆಲ್ಲೊ ಮತ್ತು ಜೆಸಿಂತಾ ರೆಬೆಲ್ಲೊ ಅವರ ಮೂವರು ಮಕ್ಕಳ ಪೈಕಿ ಕಿರಿಯವರಾದ ರಾಯ್ಸನ್ ಬೆನೆಟ್ ರೆಬೆಲ್ಲೊಗೆ ಕುಂದಾಪುರ ಫ್ರೆಂಡ್ಸ್ ಕ್ಲಬ್ ಸಹಕಾರ ನೀಡಿದೆ. ಇವರು ರಾಜಸ್ತಾನದಲ್ಲಿ ಜರುಗಿದ 16ನೇ ಯೂತ್ ನೇಶನಲ್ ಪಂದ್ಯಾವಳಿಯಲ್ಲಿ ಬೆಳ್ಳಿಪದಕ ಗಳಿಸಿದ್ದರು. ಕೊಲೊಂಬೊದಲ್ಲಿ ನಡೆದ ಯೂತ್ ಏಷ್ಯಾನ್ ಪಂದ್ಯಾವಳಿಯಲ್ಲಿ ತಂಡಕ್ಕೆ 7 ಸ್ಥಾನ ಲಭಿಸಿದೆ.
    ಹೆಮ್ಮಾಡಿಯ ಜಾಲಾಡಿ ಕ್ರಾಸ್‌ನಲ್ಲಿ ತಂದೆ ಬೋನಿಫಸ್ ರೆಬೆಲ್ಲೊ, ತಾಯಿ ಜೆಸಿಂತಾ ರೆಬೆಲ್ಲೊ ಅವರೊಂದಿಗೆ ಆಗಮಿಸಿದ ರಾಯ್ಸನ್ ಅವರನ್ನು ನಾಗರಿಕರು ಹೂವು ಮಾಲೆ ಸಮರ್ಪಿಸಿ, ಪಟಾಕಿ ಸಿಡಿಸಿ ಸ್ವಾಗತಿಸಿದರು. ಬಳಿಕ ತೆರೆದ ವಾಹನದಲ್ಲಿ ಹೆಮ್ಮಾಡಿ  ವೃತ್ತದ ತನಕ ಭವ್ಯ ಮೆರವಣಿಗೆಯಲ್ಲಿ ಕರೆದೊಯ್ದ ಸನ್ಮಾನಿಸಿದರು.
    ಪಂಚಾಯಿತಿ ಅಧ್ಯಕ್ಷ ಶರತ್‌ಕುಮಾರ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಒಲಂಪಿಯಾ ಲಾಜರಸ್, ಕ್ಯಾಥೊಲಿಕ್ ಸಭಾ ಅಧ್ಯಕ್ಷ ಕಿರಣ್ ಕ್ರಾಸ್ತಾ, ವಲಯ ಅಧ್ಯಕ್ಷ ಹೆರಿಕ್ ಗೊನ್ಸಾಲ್ವಿಸ್, ಗಂಗೊಳ್ಳಿ ಘಟಕ ಅಧ್ಯಕ್ಷ ಫೆಲಿಕ್ಸ್ ಫರ್ನಾಂಡೀಸ್, ಇನ್ನಿತರರು ಉಪಸ್ಥಿತರಿದ್ದರು.

Volleyball player Raysan Benat
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com