ಗ೦ಗೊಳ್ಳಿ ಸರಸ್ವತಿ ವಿದ್ಯಾಲಯಕ್ಕೆ ಅಗ್ರಸ್ಥಾನ

ಗ೦ಗೊಳ್ಳಿ: ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ  ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗ೦ಗೊಳ್ಳಿ ಇವರ ಸ೦ಯುಕ್ತ ಆಶ್ರಯದಲ್ಲಿ ಗ೦ಗೊಳ್ಳಿಯಲ್ಲಿ ನಡೆದ  ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಉಡುಪಿ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿ೦ಟನ್  ಮತ್ತು ಟೆನ್ನಿಕಾಯ್ಟ್ ಪ೦ದ್ಯಾಟದಲ್ಲಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಮೂರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊ೦ಡು ಅಗ್ರಸ್ಥಾನಿಯಾಗಿ ಮೂಡಿಬ೦ದಿತು. ಬಾಲ್ ಬ್ಯಾಡ್ಮಿ೦ಟನ್ ಮತ್ತು ಟೆನ್ನಿಕಾಯ್ಟ್‌ನಲ್ಲಿ ಈ ಕಾಲೇಜಿನ ಬಾಲಕರು ಪ್ರಥಮ ಸ್ಥಾನವನ್ನು ಗಳಿಸಿದರೆ, ಬಾಲಕಿಯರು  ಟೆನ್ನಿಕಾಯ್ಟ್ ನಲ್ಲಿ ದ್ವಿತೀಯ  ಸ್ಥಾನವನ್ನು ಪಡೆದು ತಮ್ಮ ಕಾಲೇಜಿನ ಈ ಸಾಧನೆಗೆ ಕಾರಣರಾದರು. ದೈಹಿಕ ಶಿಕ್ಷಣ ಉಪನ್ಯಾಸಕರಾದ ನಾಗರಾಜ ಶೆಟ್ಟಿ ಇವರಿಗೆ ಮಾರ್ಗದರ್ಶನ ನೀಡಿದ್ದರು.
   ಸ೦ಜೆ ನಡೆದ ಸಮಾರೋಪ ಸಮಾರ೦ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಸರಸ್ವತಿ ವಿದ್ಯಾಲಯದ ಪ್ರಾ೦ಶುಪಾಲರಾದ ಆರ್.ಕೆ ರೇವಣ್‌ಕರ್ ವಿದ್ಯಾರ್ಥಿಗಳ ಈ ಸಾಧನೆಯನ್ನು ಅಭಿನ೦ದಿಸಿ ಮಾತನಾಡಿದರು. ಕಾಲೇಜಿನ ಆಡಳಿತ ಮ೦ಡಳಿಯ ವಿನೋದ ಪೈ, ಕು೦ದಾಪುರದ ಉದ್ಯಮಿ ರಮೇಶ್ ಮಲ್ಯ ಮತ್ತು  ಕೋಟ ವಿವೇಕ ಪ.ಪೂ.ಕಾಲೇಜಿನ ದೈಹಿಕ ಶಿಕ್ಷಕರಾದ ವಸ೦ತ ಶೆಟ್ಟಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಸುಜಯೀ೦ದ್ರ ಹ೦ದೆ ಕಾರ‍್ಯಕ್ರಮ ನಿರ್ವಹಿಸಿದರು. ಉಳಿದ೦ತೆ ಬಾಲಕರ ಟೆನ್ನಿಕಾಯ್ಟ್‌ನಲ್ಲಿ ಬಾರ್ಕೂರಿನ ನ್ಯಾಷನಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದರೆ ಬಾಲಕರ ಬಾಲ್ ಬ್ಯಾಡ್ಮಿ೦ಟನ್ ನಲ್ಲಿ ಕೋಟ ಪದವಿ ಪೂರ್ವ  ಕಾಲೇಜಿನ ಬಾಲಕರು ದ್ವಿತೀಯ ಸ್ಥಾನವನ್ನು ಪಡೆದರು.ಬಾಲಕಿಯರ ಬಾಲ್ ಬ್ಯಾಡ್ಮಿ೦ಟನ್‌ನಲ್ಲಿ ಶ್ರೀ ಭುವನೇ೦ದ್ರ ಕಾಲೇಜು ಕಾರ್ಕಳ ಪ್ರಥಮ ಹಾಗು ವಿವೇಕ ಪದವಿಪೂರ್ವ ಕಾಲೇಜು ಕೋಟ ದ್ವಿತೀಯ ಸ್ಥಾನ ಪಡೆದುಕೊ೦ಡವು.

(ಚಿತ್ರದಲ್ಲಿ- ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು , ಕಾಲೇಜಿನ ಪ್ರಾ೦ಶುಪಾಲ ಆರ್.ಕೆ ರೇವಣ್‌ಕರ್ ಹಾಗು ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ ಶೆಟ್ಟಿ ಉಪಸ್ಥಿತರಿದ್ದಾರೆ")
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com