ಬೈಂದೂರು ತಾಲೂಕು ರಚನೆಗೆ ಮನವಿ

ಕುಂದಾಪುರ: :ತಾಲೂಕು ರಚನೆಯನ್ನು ಸರಕಾರವು ಯಾವುದೇ ಕಾರಣಕ್ಕೂ ಕೈ ಬಿಡ ಬಾರದು ಸರಕಾರವು ತಾಲೂಕು ರಚನೆಯನ್ನು ಘೋಷಿಸಲು ಕ್ರಮಕೈಗೊಂಡು ಬೈಂದೂರನ್ನುತಾಲೂಕಾಗಿ ಘೋಷಿಸಬೇಕೆಂದು ಬೈಂದೂರಿನ ಸಾಮಾಜಿಕ ಕಾರ್ಯಕರ್ತ ರವೀಂದ್ರ ಶ್ಯಾನಭಾಗ್‌ ಅವರು ಒತ್ತಾಯಿಸಿದ್ದಾರೆ.

ಬೈಂದೂರು ತಾಲೂಕುರಚನೆ ಬಹು ವರ್ಷದ ಹಿಂದಿನ ಬೇಡಿಕೆಯಾಗಿರುತ್ತದೆ.ಭೌಗೋಳಿಕ, ವಿಶಾಲತೆ, ಹಾಗೂ ತಾಲೂಕು ಮಟ್ಟದ ಹೆಚ್ಚಿನ ಸರಕಾರಿ ಕಛೇರಿಗಳು ಬೈಂದೂರಿನಲ್ಲಿ ಇದ್ದು ತಾಲೂಕು ರಚನೆಗೆಅರ್ಹತೆ ಹೊಂದಿರುತ್ತದೆ. ಹಿಂದಿನ ಸರಕಾರವು 43 ತಾಲೂಕುಗಳನ್ನು ರಚನೆ ಮಾಡಿತ್ತು. ನಂತರ ಬಂದ ಕಾಂಗ್ರೇಸ್‌ ಸರಕಾರ ತಾಲೂಕುರಚನೆಯನ್ನು ಕೈಗೊಳ್ಳಲೇ ಇಲ್ಲ. ಹುಂಡೆಕರ್‌ ಹಾಗೂ ಗದ್ದಿಗೌಡರ್‌ಅವರಂತ ಹಿರಿಯ ಅಧಿ ಕಾರಿಗಳು ಬೈಂದೂರು ತಾಲೂಕು ರಚನೆಗೆ ಶಿಪಾರಸ್ಸು ಮಾಡಿದ್ದರು. ಬೈಂದೂರು ಹೋಬಳಿಯ ಹೆಚ್ಚಿನ ಗ್ರಾಮವನ್ನುನಾದರೂ ಸೇರಿಸಿ ಬೈಂದೂರು ತಾಲೂಕುನ್ನಾಗಿ ಕೂಡಾ ರಚಿಸಿಬಹುದು. ಬೈಂದೂರಿನಲ್ಲಿ ನ್ಯಾಯಾಲಯನ್ನು ಕೂಡಾ ಸ್ಥಾಪಿಸಬೇಕು. ಬೈಂದೂರು ಹಾಗೂ ಯಡ್ತರೆ ಗ್ರಾಮ ಪಂಚಾಯತ್‌ ಸೇರಿಸಿ ಪುರಸಭೆ ರಚನೆಯ ಬೇಡಿಕೆ ಇರುತ್ತದೆ. ಹಾಗೂ ಬೈಂದೂರಿನ ಬೈಪಾಸು  ರಸ್ತೆ ಅಗಲೀಕರಣ ಸಂದರ್ಭ(ರಾ.ಹೆ.66) ಮೇಲ್‌ ಸೇತುವೆಯನ್ನು ರಚಿಸಬೇಕೆಂದು ಹಾಗೂ ಯಡ್ತರೆ ಬೆ„ಪಾಸು ಬಳಿ ಕೊಲ್ಲೂರು ಹೋಗುವ ಪ್ರಮುಖ ರಾಜ್ಯ ಹೆದ್ದಾರಿ ಇದ್ದು ರಸ್ತೆಅಗಲೀಕಣ ಸಂದರ್ಭದಲ್ಲಿ ಜನರಿಗೆ ಉಪಯೋಗದ ದೃಷ್ಟಿಯಲ್ಲಿ ಹೆದ್ದಾರಿ ರಚಿಸಬೇಕೆಂದು ಅವರು ಶಾಸಕರನ್ನು ಒತ್ತಾಯಿಸಿದ್ದಾರೆ.ಸಾರ್ವಜನಿಕ ಸಹಿಯೊಂದಿಗೆ ಸ್ಥಳೀಯ ಶಾಸಕರಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ಈ ಬಗ್ಗೆ ಮನವಿಯನ್ನು ಬೈಂದೂರಿನ ಸಾಮಾಜಿಕ ಕಾರ್ಯಕರ್ತ ರವೀಂದ್ರಶ್ಯಾನಭಾಗ್‌ ರವರು ಸಲ್ಲಿಸಿರುತ್ತಾರೆ.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com