ಬಸ್ರೂರು: ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ

 ಬಸ್ರೂರು: ಇಲ್ಲಿನ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ (ಎನ್.ಎಸ್.ಎಸ್) ಅಮಾಸೆಬೈಲ್‌ನ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭ ನೆರವೇರಿತು. ಮಾನ್ಯ ಎ.ಜಿ.ಕೊಡ್ಗಿ, ಮಾಜಿ ಶಾಸಕರು ಹಾಗೂ ಮಾಜಿ ಅಧ್ಯಕ್ಷರು, ಮೂರನೇ ಹಣಕಾಸು ಆಯೋಗ, ಕರ್ನಾಟಕ ಸರಕಾರ ಇವರು ದೀಪ ಬೆಳಗಿಸುವುದರ ಮೂಲಕ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ, ಜಾತ್ಯಾತೀತ ಮನೋಭಾವನೆಯಲ್ಲಿ ಶಿಬಿರಾರ್ಥಿಗಳು ಒಗ್ಗೂಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆನೀಡಿದರು. ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಸಂಚಾಲಕರಾದ ಶ್ರೀ ಬಿ. ಅಪ್ಪಣ್ಣ ಹೆಗ್ಡೆಯವರು ಶಿಬಿರದ ಯಶಸ್ಸಿಗೆ ಶುಭಾಶಂಸನೆಗೈದರು. ಶ್ರೀ ಶಾರದಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಎಂ. ಚಂದ್ರಪ್ರಭಾ ಆರ್ ಹೆಗ್ಡೆ, ಶ್ರೀ ನವೀನ್ ಚಂದ್ರ ಶೆಟ್ಟಿ, ಸದಸ್ಯರು ತಾಲೂಕು ಪಂಚಾಯತ್ ಕುಂದಾಪುರ ಇವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ ಅಮಾಸೆಬೈಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸದಾಶಿವ ಶೆಟ್ಟಿಯವರು ಎನ್.ಎಸ್.ಎಸ್. ಶಿಬಿರಾರ್ಥಿಗಳು ಶಿಸ್ತು ಸಂಯಮದ ಮೂಲಕ ಆದರ್ಶ ವ್ಯಕ್ತಿಯಾಗಬೇಕೆಂದು ತಮ್ಮ ಅಧ್ಯಕ್ಷ ಭಾಷಣದಲ್ಲಿ ನುಡಿದರು. ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ  ಶ್ರೀ ಜಯಪ್ರಕಾಶ್ ಶೆಟ್ಟಿಯವರು ಶಿಬಿರದ ಬಗ್ಗೆ ಪ್ರಸ್ತಾವನೆ  ಸಲ್ಲಿಸಿದರು. ಘಟಕದ ವಿದ್ಯಾರ್ಥಿ ನಾಯಕರಾದ ನಿಖಿಲ್ ಮತ್ತು ತ್ರಿವೇಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಸಂಯೋಜಕರಾದ ಶ್ರೀ ಪಾಂಡುರಂಗ ಇವರು ಅತಿಥಿಗಳನ್ನು ಸ್ವಾಗತಿಸಿದರು. ಸಹ ಸಂಯೋಜಕರಾದ ಶ್ರೀಮತಿ ಆಶಾರವರು ಧನ್ಯವಾದ ಸಲ್ಲಿಸಿದರು. ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರಾದ ಶ್ರೀಮತಿ ಸುಮತಿ ಶೆಣೈ ಕಾರ್ಯಕ್ರಮ ನಿರೂಪಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com