ಎಂಡೋಸಲ್ಫಾನ್ ಸಂತ್ರಸ್ತರ ಶಿಬಿರ

ಬೈಂದೂರು: ಇಲ್ಲಿನ ರೋಟರಿ ಸಭಾ ಭವನದಲ್ಲಿ ಬೈಂದೂರು ವ್ಯಾಪ್ತಿಯ ಎಂಡೋಸಲ್ಫಾನ್ ಸಂತ್ರಸ್ತರ ಶಿಬಿರ ಗುರುವಾರ ನಡೆಯಿತು. ಬೈಂದೂರು, ಕೊಲ್ಲೂರು, ಶಿರೂರು, ಕಿರಿಮಂಜೇಶ್ವರ, ಬಿಜೂರು, ಕೆರ್ಗಾಲ್, ಗೋಳಿಹೊಳೆ, ನಾವುಂದ, ಮರವಂತೆ ಸೇರಿದಂತೆ ಬೈಂದೂರು ವ್ಯಾಪ್ತಿಯ 16 ಗ್ರಾಮದ ಸುಮಾರು 125 ಸಂತ್ರಸ್ತರು ಶಿಬಿರಕ್ಕೆ ಹಾಜರಾಗಿದ್ದರು.

ಈ ಭಾಗದಲ್ಲಿ ಈ ಹಿಂದೆ ಎರಡು ಬಾರಿ ಶಿಬಿರ ಏರ್ಪಡಿಸಿದ್ದು, ಇದರಲ್ಲಿ ಭಾಗವಹಿಸಿದ ಹಾಗೂ ಸರ್ವೆಯಲ್ಲಿ ಬಿಟ್ಟು ಹೋದ ಸಂತ್ರಸ್ತರಿಗಾಗಿ ಈ ಶಿಬಿರ ನಿಗದಿಪಡಿಸಲಾಗಿತ್ತು. ಈ ಶಿಬಿರದಲ್ಲಿ ಎಂಡೋಸಂತ್ರಸ್ತರನ್ನು ತಪಾಸಣೆ ನಡೆಸಿ ಸರಕಾರದಿಂದ ಸಿಗುವ ಮಾಸಾಶನಕ್ಕಾಗಿ ಆಯ್ಕೆ ಮಾಡಿ ಗುರುತಿನ ಚೀಟಿ ನೀಡಲಾಯಿತು. 

ಈವರೆಗೆ ತಾಲೂಕಿನಾದ್ಯಂತ ನಡೆಸಿದ ಎಂಡೋಸಂತ್ರಸ್ತರ ಶಿಬಿರದಲ್ಲಿ ಸುಮಾರು 776 ಮಂದಿಯನ್ನು ಗುರುತಿಸಲಾಗಿದ್ದು, ಎಲ್ಲರಿಗೂ ಸರಕಾರ ಮಾಸಾಶನ ಲಭಿಸುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಚಿದಾನಂದ ತಿಳಿಸಿದ್ದಾರೆ. 

ವೈದ್ಯರ ವಿಳಂಬ: ಎಂಡೋಸಲ್ಫಾನ್ ಪೀಡಿತರು ಬೆಳಗ್ಗೆ 8 ಗಂಟೆಯಿಂದಲೇ ಹಾಜರಾಗಿ ವೈದ್ಯರಿಗಾಗಿ ಕಾಯುತ್ತಿದ್ದರು. ಶಿಬಿರ ಬೆಳಗ್ಗೆ 9 ಗಂಟೆಗೆ ನಿಗದಿಯಾಗಿದ್ದರೂ ಕೆಲವು ವೈದರು ಎರಡು ಗಂಟೆ ವಿಳಂಬವಾಗಿ ಶಿಬಿರಕ್ಕೆ ಆಗಮಿಸಿರುವುದರಿಂದ ಎಂಡೋ ಪೀಡಿತರು ವೈದ್ಯರಿಗಾಗಿ ಕಾದು ಕಾದು ಸುಸ್ತಾದರು. 

ಮಾನಸಿಕ ಕಾಯಿಲೆ ತಜ್ಞರಾದ ಡಾ. ಸುಖದಾ, ನೇತ್ರ ತಜ್ಞ ಡಾ. ದಿನಕರ್, ಇಎನ್‌ಟಿ ತಜ್ಞ ಡಾ. ರಾಬರ್ಟ್, ಮೂಳೆ ತಜ್ಞ ಡಾ. ಶಿವ ಕುಮಾರ್, ಜಿಲ್ಲಾಸ್ಪತ್ರೆಯ ತಜ್ಞರು ಹಾಗೂ ವಲಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರುಗಳಾದ ಡಾ. ಗೌತಮ್, ಡಾ. ವಿದ್ಯಾ ಹಾಗೂ ಡಾ. ಗಿರೀಶ ಶಿಬಿರಾರ್ಥಿಗಳಿಗೆ ಸೂಕ್ತ ತಪಾಸಣೆ ನಡೆಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com