ವಿದ್ಯುತ್‌ ಗುತ್ತಿಗೆದಾರರ ಸಂಘದ ವಾರ್ಷಿಕ ಮಹಾಸಭೆ

ಕುಂದಾಪುರ: ಗುತ್ತಿಗೆದಾರ ಹಾಗೂ ಮೆಸ್ಕಾಂ ಅಧಿಕಾರಿಗಳು ಒಂದೇ ನಾಣ್ಯದ ಎರಡು ಮುಖಗಳಿಂದ್ದತೆ. ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ನೀಡುವುದರ ಮೂಲಕ ತಮ್ಮ ಸೇವೆಯು ಇತರರಿಗೆ ಮಾದರಿಯಾಗಲಿ. ಹಾಗೇ ಈ ಗುತ್ತಿಗೆದಾರರ ಸಂಘದ ಕುಂದಾಪುರ ಕಚೇರಿಯನ್ನು ಸ್ಥಾಪಿಸುವುದಕ್ಕೆ ಮಾತƒ ಸಂಘದಿಂದ ನೆರವು ನೀಡುವುದರಲ್ಲಿ ಶ್ರಮಿಸುತ್ತೇನೆ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ನಾಗರಾಜ್‌ ರಾವ್‌ ಹೇಳಿದರು.

ರೋಟರಿ ಮಿಡ್‌ಟೌನ್‌ ಸಭಾಂಗಣದಲ್ಲಿ ಜರಗಿದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ಕುಂದಾಪುರ ಉಪಸಮಿತಿ ಅಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಇಲಾಖೆಯ ನೂತನ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಕುಂದಾಪುರ ಉಪವಿಭಾಗ ಅಸಿಸ್ಟೆಂಟ್‌ ಎಕ್ಸೂಕ್ಯೂಟೀವ್‌ ಇಂಜಿನಿಯರ್‌ ಅಶೋಕ್‌ ಪೂಜಾರಿ ಮತ್ತು ಬೆ„ಂದೂರು ಉಪವಿಭಾಗದ ಅಸಿಸ್ಟೆಂಟ್‌ ಎಕ್ಸೂಕ್ಯೂಟೀವ್‌ ಇಂಜಿನಿಯರ್‌ ಯಶವಂತ್‌ ಅವರನ್ನು ಸನ್ಮಾನಿಸಲಾಯಿತು. ಹಾಗೂ ಸಂಘಟನೆಯ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.

ಕ.ರಾ.ಅ.ಪ.ವಿ.ಗು. ಸಂಘ ಉಡುಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಸತೀಶ ಎಂ ನಾಯ್ಕ, ಉಡುಪಿ ಜಿಲ್ಲಾ ಸಮಿತಿ ಮುಂಖಡರಾದ ಎ.ಕೆ.ಆಳ್ವ, ರಮಾನಂದ, ಉದಯಕುಮಾರ್‌, ಕುಂದಾಪುರ ಸಮಿತಿ ಉಪಾಧ್ಯಕ್ಷ ವಾಸುದೇವ ಹಾಗೂ ಜತೆ ಕಾರ್ಯದರ್ಶಿ ಜೆ.ಸುದರ್ಶನ್‌ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com