ಚರಂಡಿಯಲ್ಲಿ ಬಿದ್ದು ಒದ್ದಾಡುತ್ತಿದೆ ಪೋಲೀಸ್ ಬ್ಯಾರಿಕೇಡ್

ಗಂಗೊಳ್ಳಿ:  ಪೋಲೀಸ್ ಇಲಾಖೆಗೆ ಸೇರಿದ ಬ್ಯಾರಿಕೇಡ್ ಕಳೆದ ಸುಮಾರು ೧೫ ದಿನಗಳಿಂದ ವಾರಿಸುದಾರರಿಲ್ಲದೆ ಚರಂಡಿಯಲ್ಲಿ ತುಕ್ಕು ಹಿಡಿದು ಹಾಳಾಗುತ್ತಿದೆ. ಗಂಗೊಳ್ಳಿಯಲ್ಲಿ ಇತ್ತೀಚಿಗೆ ಜರಗಿದ ಸಾರ್ವಜನಿಕ ಶ್ರೀ ಶಾರದೋತ್ಸವದ ಸಂದರ್ಭ ಭದ್ರತೆಗಾಗಿ ಅಳವಡಿಸಲಾಗಿದ್ದ ಎರಡು ಬ್ಯಾರಿಕೇಡ್‌ಗಳ ಪೈಕಿ ಚರ್ಚ್ ರಸ್ತೆ ಸಮೀಪ ಅಳವಡಿಸಲಾಗಿದ್ದ ಬ್ಯಾರಿಕೇಡ್ ಚರಂಡಿಯಲ್ಲಿ ಬಿದ್ದುಕೊಂಡಿದ್ದರೆ, ಇನ್ನೊಂದು ಕೆನರಾ ಬ್ಯಾಂಕ್ ಸಮೀಪ ಅಡ್ಡಾದಿಡ್ಡಿಯಾಗಿ ಬಿದ್ದುಕೊಂಡಿದೆ. ಈಗಾಗಲೇ ಸಂಪೂರ್ಣ ತುಕ್ಕು ಹಿಡಿದು ಹಾಳಾಗಿರುವ ಈ ಬ್ಯಾರಿಕೇಡ್‌ಗಳು ಬೇಡವಾದ ವಸ್ತುವಿನ ರೀತಿಯಲ್ಲಿ ಎಸೆಯಲಾಗಿದೆ. ತಮ್ಮ ಕೆಲಸಕಾರ್ಯ ಮುಗಿದ ಬಳಿಕ ಅದನ್ನು ಸುರಕ್ಷಿತವಾಗಿ ಇಡುವ ಬದಲು ಸಂಪೂರ್ಣ ಹಾಳಾಗಿ ಹೋಗಲಿ ಎಂಬಂತೆ ಈ ಬ್ಯಾರಿಕೇಡ್‌ಗಳನ್ನು ಇಟ್ಟಿರುವುದು ಖಂಡನೀಯ ಎಂದು ಗ್ರಾಮಸ್ಥರು ತಿಳಿಸಿದ್ದಾರೆ
 ಬ್ಯಾರಿಕೇಡ್‌ಗಳನ್ನು ಈ ರೀತಿಯಾಗಿ ಇಟ್ಟಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸರಕಾರದ ಸೊತ್ತುಗಳನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಲು ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com