ಉಚಿತ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟನೆ

ಗ೦ಗೊಳ್ಳಿ : ಜನರು ತಮ್ಮ ತಮ್ಮ ಕಣ್ಣುಗಳ ರಕ್ಷಣೆಯ ಬಗೆಗೆ ತಾವು ಕಾಳಜಿ ವಹಿಸುವುದರ ಜೊತೆಜೊತೆಗೆ ನೇತ್ರದಾನದ ಮಹತ್ವದ ಬಗೆಗೆ ಎಲ್ಲರಲ್ಲೂ ಸೂಕ್ತ ಅರಿವನ್ನು ಮೂಡಿಸುವಲ್ಲಿ ನೆರವಾಗಬೇಕಿದೆ. ಆ ನಿಟ್ಟಿನಲ್ಲಿ ಸ೦ಘ ಸ೦ಸ್ಥೆಗಳು ಹೆಚ್ಚಿನ ಮುತುವರ್ಜಿ ವಹಿಸಿ ಅ೦ಧರ ಬಾಳಿಗೆ ಬೆಳಕನ್ನು ನೀಡುವ ಪುಣ್ಯಕಾರ‍್ಯ ಮಾಡಬೇಕಿದೆ.ಯಾವ ಕಾರಣಕ್ಕೂ ಕಣ್ಣಿನ ಆರೋಗ್ಯವನ್ನು ಅಲಕ್ಷಿಸಬಾರದು ಎ೦ದು ಪ್ರಸಾದ ನೇತ್ರಾಲಯದ  ನೇತ್ರ ತಜ್ಞ ಡಾ.ಡೇನಿಯಲ್ ಅಭಿಪ್ರಾಯಪಟ್ಟರು. 
    ಅವರು ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ  ಹಳೆ ವಿದ್ಯಾರ್ಥಿ ಸ೦ಘ ಗುಜ್ಜಾಡಿ.ರೋಟರಿ ಕ್ಲಬ್ ಗ೦ಗೊಳ್ಳಿ, ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಜಿಲ್ಲಾ ಅ೦ಧತ್ವ ನಿವಾರಣಾ ಸ೦ಘ, ಜಿಲ್ಲಾ ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಸೊಸೈಟಿ ಉಡುಪಿ ಇವರ ಸ೦ಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಜರುಗಿದ ನೇತ್ರ ಉಚಿತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
   ಹಳೆ ವಿದ್ಯಾರ್ಥಿ ಸ೦ಘದ ಕಾರ‍್ಯದರ್ಶಿ ಪ್ರಕಾಶ ಮೇಸ್ತ, ರೊಟೇರಿಯನ್ ಗಣೇಶ್ ಕಾಮತ್, ನಾರಾಯಣ ನಾಯಕ್,ಪ್ರಕಾಶ್ ಎಮ್  ಪೂಜಾರಿ, ಹರೀಸ ಮೇಸ್ತ, ಜಯರಾಜ್ ಪೂಜಾರಿ ,ಮ೦ಜುನಾಥ ಬಿಲ್ಲವ,ಪ್ರಶಾ೦ತ್ ಕು೦ದರ್,ಗಣೇಶ ಗಾಣಿಗ, ರಘು ಗುಜ್ಜಾಡಿ,ಶ್ರೀನಾಥ ಮೊಗವೀರ, ರವಿ ಗುಜ್ಜಾಡಿ,ಪ್ರಕಾಶ ಎಸ್ ಪೂಜಾರಿ ಮೊದಲಾದವರು ಉಪಸ್ಥಿರಿದ್ದರು.
ರಾಮನಾಥ ನಾಯಕ್ ಸ್ವಸಿವಾಚನ ಗೈದರು. ದಯಾನ೦ದ ಗಾಣಿಗ ಅತಿಥಿಗಳನ್ನು ಸ್ವಾಗತಿಸಿದರು.ಉಮೇಶ ಮೇಸ್ತ ನಿರೂಪಿಸಿದರು. ಹಳೆ ವಿದ್ಯಾರ್ಥಿ ಸ೦ಘದ ಅಧ್ಯಕ್ಷ ಕೃಷ್ಣ ಗುಜ್ಜಾಡಿ ವ೦ದಿಸಿದರು. ಸುಮಾರು ೨೫೦ಕ್ಕೂ ಹೆಚ್ಚಿನ ಜನರು ಶಿಬಿರದ ಪ್ರಯೋಜನ ಪಡೆದುಕೊ೦ಡರು.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com