ಕಲೆ, ಸಾಹಿತ್ಯ, ಸಿನಿಮಾಗಳು ಮನಸ್ಸನ್ನು ಅರಳಿಸುತ್ತವೆ: ಕಾಯ್ಕಿಣಿ

ಮೂಡುಬಿದಿರೆ: ಅವ್ಯಕ್ತತೆಯೇ ಸಾಹಿತ್ಯದ ಜೀವಾಳ. ಚಿಂತನೆಯ ಒಂದು ವಿಧಾನವೇ ಬರವಣಿಗೆ. ಸಾಹಿತ್ಯ ಪ್ರದರ್ಶನ ಕಲೆಯಲ್ಲ. ಅದು ದರ್ಶನ ಕಲೆ ಎಂದು ಕವಿ ಜಯಂತ ಕಾಯ್ಕಿಣಿ ಹೇಳಿದರು. 

ಆಳ್ವಾಸ್ ಕಾಲೇಜಿನ ವತಿಯಿಂದ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಬೆಳದಿಂಗಳ ಚಿಂತನ ಕಾರ‌್ಯಕ್ರಮದಲ್ಲಿ 'ಕಲೆ, ಸಾಹಿತ್ಯ, ಸಿನಿಮಾ' ವಿಷಯದ ಕುರಿತು ಅವರು ಮಾತನಾಡಿದರು. ಕಾವ್ಯ ನಿತ್ಯದ ಸಂಗತಿಗಳನ್ನು ಹೊಸ ಬೆಳಕಿನಲ್ಲಿ ತೋರಿಸಿದರೆ, ಬದುಕಿನಲ್ಲಿ ಕಲೆ, ಸಾಹಿತ್ಯ, ಸಿನಿಮಾಗಳು ನಮ್ಮ ಮನಸ್ಸನ್ನು ಅರಳಿಸುತ್ತವೆ. ಆಸ್ತತೆಯನ್ನು ಬೆಳೆಸುತ್ತದೆ ಎಂದರು. 

ಇಂದು ದೃಶ್ಯ ಮಾಧ್ಯಮಗಳು ಜ್ಞಾನ, ಮಾಹಿತಿ ಹೆಸರಿನಲ್ಲಿ ಹಣದ ದಾಸರನ್ನಾಗಿಸಲು ಪ್ರೇರಣೆ ನೀಡುತ್ತವೆ. ದುಡ್ಡಿನ ವ್ಯಾಮೋಹಕ್ಕೆ ಒಳಗಾದಾಗ ನಮ್ಮ ಸಾಕ್ಷಿಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ. ಹಣದ ವ್ಯಾಮೋಹದ ಪರಿಣಾಮವಾಗಿಯೇ ಭ್ರಷ್ಟರು, ಶ್ರೀಮಂತರು ಗಣ್ಯರು ಮುಖವಾಡ ತೊಡುತ್ತಿದ್ದಾರೆ. ಹೀಗಾಗಿ ಯುವಜನಗೆೆ ಆದರ್ಶ ವ್ಯಕ್ತಿಗಳಾರು ಎಂಬ ಗೊಂದಲವೇರ್ಪಟ್ಟಿದೆ ಎಂದ ಅವರು, ಚಲನಚಿತ್ರಗಳಿಂದ ಕನ್ನಡ ಭಾಷೆಗಾದ ಪ್ರಯೋಜನಗಳ ಕುರಿತು ವಿಶ್ಲೇಷಿಸಿ ಮುಂಗಾರು ಮಳೆಯ ಹಾಡುಗಳ ಜನಪ್ರಿಯತೆ ಯಿಂದಾಗಿ ಇಂಗ್ಲಿಷ್ ಓದುವವರೂ ಕನ್ನಡದ ಪದ್ಯಗಳನ್ನು ಓದಲು ಪ್ರಾರಂಭಿಸಿದ್ದಾರೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಸುಲತಾ ವಿದ್ಯಾಧರ್ ಕಾರ್ಯಕ್ರಮ ನಿರ್ವಹಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com