ಅತ್ಯುತ್ತಮ ಗ್ರಾ.ಪಂ. ಪ್ರಶಸ್ತಿ ಪ್ರದಾನ

ಕೋಟ: ಕೋಟತಟ್ಟು ಗ್ರಾ. ಪಂ., ಡಾ| ಶಿವರಾಮ ಕಾರಂತ ಟ್ರಸ್ಟ್‌ ಮತ್ತು ಅನೇಕ ಸಂಘ ಸಂಸ್ಥೆಗಳ ವತಿಯಿಂದ ಕೋಟದಲ್ಲಿ ನಡೆಯುತ್ತಿರುವ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಂಗವಾಗಿ ಅ. 7ರಂದು, ಜಯಂಟ್ಸ್‌ ಉಡುಪಿ, ಗೀತಾನಂದ ಪೌಂಡೇಶನ್‌ ಮಣೂರು-ಪಡುಕರೆ ಸಾದರಪಡಿಸುವ, ಜನಾಧಿಕಾರ ಪ್ರತಿಷ್ಠಾನ, ಕೋಟ ಸಹಯೋಗದಲ್ಲಿ ನಡೆದ ಪಂಚಾಯತ್‌ ಹಬ್ಬ 'ಸುರಾಜ್ಯ' ಕಾರ್ಯಕ್ರಮದಲ್ಲಿ, ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅತ್ಯುತ್ತಮ ಪರಿಣಾಮಕಾರಿ ಆಡಳಿತ ನೀಡಿದ ಸುಳ್ಯ ತಾಲೂಕಿನ ಐರ್ವನಾಡು, ಬೆಳ್ತಂಗಡಿ ತಾಲೂಕಿನ ಲಾಯಿಲ, ಉಡುಪಿ ತಾಲೂಕು ತೆಂಕ ಗ್ರಾ.ಪಂ., ಕುಂದಾಪುರ ತಾಲೂಕಿನ ಮರವಂತೆ ಗ್ರಾ.ಪಂ.ಗಳಿಗೆ ಹಾಗೂ ತಲ್ಲೂರು ಗ್ರಾ.ಪಂ. ಅತ್ಯುತ್ತಮ ಗ್ರಾ.ಪಂ. ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ್‌ ಪ್ರಶಸ್ತಿ ವಿತರಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com