ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಕುಂದಾಪುರ: ಹಿಂದುಳಿದ ವರ್ಗದ ಜನರಿಗೆ ಪ್ರೇರಣೆಯಾದ ವಾಲ್ಮೀಕಿ ಮಹರ್ಷಿಗಳು ಬದುಕಿನಲ್ಲಿ ಅಳವಡಿಸಿಕೊಂಡ ತತ್ವ -ಸಿದ್ದಾಂತಗಳನ್ನು ನಮ್ಮೆಲ್ಲರ ಜೀವನಕ್ಕೆ ಆದರ್ಶವಾಗಿದೆ. ಜೀವನದಲ್ಲಿ ಪರಿವರ್ತನೆಯಿಂದ ಯಶಸ್ಸು ಸಾಧ್ಯ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಕುಂದಾಪುರ ಪುರಸಭೆೆಯ ಅಧ್ಯಕ್ಷೆ ಕಲಾವತಿ ಯು.ಎಸ್‌.ಹೇಳಿದರು.

ಅವರು ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತ್‌ , ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ , ಪುರಸಭೆ ಇವರ ಜಂಟಿ ಆಶ್ರಯದಲ್ಲಿ ಬುಧವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ತಾ.ಪಂ.ಅಧ್ಯಕ್ಷ ಭಾಸ್ಕರ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು.

ಮಹರ್ಷಿ ವಾಲಿ¾ಕಿ ಆವರ ಬಗ್ಗೆ ಉಪನ್ಯಾಸ ಮಾಡಿದ ಉಪನ್ಯಾಸಕ ಡಾ|ಎಂ.ದಿನೇಸ್‌ ಹೆಗ್ಡೆ ಅವರು ಅವರು ಮಾತನಾಡಿ, ಸಮಾಜದಲ್ಲಿ ಮೇಲ್ಪಂಕ್ತಿಯ ಜನರಿಗೆ ಮಾತ್ರ ಸೀಮಿತವಾಗಿದ್ದ ಕಾವ್ಯ ರಚನೆಯನ್ನು ಮಾಡಿದ ತಳಸಮುದಾಯದ ಓರ್ವ ಮಹಾನ್‌ ವ್ಯಕ್ತಿ ವಾಲಿ¾ಕಿ . ವಾಲ್ಮೀಕಿ ಬಗ್ಗೆ ಅನೇಕ ದಂತಕಥೆಗಳಿದ್ದರೂ ಅವರು ರಚಿಸಿದ ಮಹಾಕಾವ್ಯ ರಾಮಾಯಣ ಅತ್ಯದ್ಭುತವಾದದು. ಜೀವನದಲ್ಲಿ ಪ್ರತಿಯೊಬ್ಬ ಶಿಕ್ಷಣವನ್ನು ಹೊಂದಿ ಪರಿಪೂರ್ಣನಾಗಿ ಹೊರಬಂದಾಗ ಆತನಿಗೆ ಈ ಜಗತ್ತಿನ ಪರಿಚಯವಾಗುತ್ತದೆ. ಯಾವಾಗ ನಾವು ಪರಿಪೂರ್ಣರಾಗುತ್ತೇವೋ ಅದರಿಂದ ಸಮಾಜದಲ್ಲಿ ಮನ್ನಣೆ ಸಿಗುತ್ತದೆ ಎನ್ನುವುದು ಪ್ರಸ್ತುತ ಎಂದರು.

ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯ ಗಣಪತಿ ಟಿ.ಶ್ರೀಯಾನ್‌, ತಾ.ಪಂ.ಸಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ರಟ್ಟಾಡಿ ನವೀನ್‌ಚಂದ್ರ ಶೆಟ್ಟಿ, ಕುಂದಾಪುರ ಸಹಾಯಕ ಆಯುಕ್ತೆ ಚಾರುಲತಾ ಸೋಮಲ್‌, ಕಾರ್ಯನಿರ್ವಹಣಾಧಿಕಾರಿ ಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.

ಕುಂದಾಪುರ ತಹಶೀಲ್ದಾರ್‌ ಗಾಯತ್ರಿ ನಾಯಕ್‌ ಸ್ವಾಗತಿಸಿದರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಗೋಪಾಲ ಶೆಟ್ಟಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com