ಎಂ.ಎನ್. ಮಧ್ಯಸ್ಥರಿಗೆ ಸದಾನಂದ ಪ್ರಶಸ್ತಿ

ಕುಂದಾಪುರ: ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಸಂಸ್ಥಾಪಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ದಿ. ಐರೋಡಿ ಸದಾನಂದ ಹೆಬ್ಬಾರರ ನೆನಪಿನಲ್ಲಿ ಕಲಾ ಕೇಂದ್ರವು ನೀಡುವ ಸದಾನಂದ ಪ್ರಶಸ್ತಿಗೆ ಈ ಬಾರಿ ಮಣೂರು ನರಸಿಂಹ ಮಧ್ಯಸ್ಥ ಆಯ್ಕೆಯಾಗಿದ್ದಾರೆ. ಶ್ರೇಷ್ಠ ಶಿಕ್ಷಕರಾಗಿ, ಯಕ್ಷಗಾನ ಕ್ಷೇತ್ರದ ಸವ್ಯಸಾಚಿಯಾಗಿ, ಉತ್ತಮ ನಾಟಕ ರಚನಾಕಾರರೂ, ನಿರ್ದೇಶಕರಾಗಿ, ಸಮಾಜ ಸೇವಕರಾಗಿ ಜನಾನುರಾಗಿಯಾಗಿರುವ ಮಧ್ಯಸ್ಥರು ಕೋಟ ಗಿಳಿಯಾರು ಶಾಂಭವೀ ಶಾಲೆ, ಕೋಟ ವಿವೇಕ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅ.19ರಂದು ಸಂಜೆ 6 ಗಂಟೆಗೆ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕಲಾಕೇಂದ್ರದ ಪ್ರಕಟಣೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com