ದೇಶದ ಸಬಲೀಕರಣಕ್ಕೆ ಸಂಘ ಸಂಸ್ಥೆಗಳ ಅನಿವಾರ್ಯ

ಕುಂದಾಪುರ: ಸರ್ವಜನಾಂಗದ ಶಾಂತಿಯ ಹೂದೋಟವಾದ ನಮ್ಮ ಭಾರತ ದೇಶದಲ್ಲಿ ಎಲ್ಲಾ ಧರ್ಮದ ಜನರು ಸೌಹಾರ್ದ ರೀತಿಯಲ್ಲಿ ಬಾಳಲು ಕರೆ ನೀಡುವ ಸಂಸ್ಥೆಗಳು ಹುಟ್ಟಿ ಬಂದಾಗ ದೇಶ ಸಬಲೀಕರಣಗೊಳ್ಳುತ್ತದೆ ಎಂದು ಬಾಳೆಕೋಡಿ ಶ್ರೀ ಸದ್ಗುರು ಶಶಿಕಾಂತ ಮಣಿ ಸ್ವಾಮಿಜಿಯವರು ಹೇಳಿದರು.

ಅವರು ಅ.16ರಂದು ಪಾರಿಜಾತ ಸ್ನೇಹ ಸಭಾಂಗಣದಲ್ಲಿ ಏರ್ಪಡಿಸಿದ ಸ್ಪಂದನ ಟ್ರಸ್ಟ್‌ ಕುಂದಾಪುರ ಶಾಖೆಯ ಪ್ರತಿನಿಧಿಧಿ ತರಭೇತಿಯನ್ನು ಉದ್ಘಾಟಿಸಿ ಮಾತನಾಡಿದರು.

ಸ್ಪಂದನ ಟ್ರಸ್ಟ್‌ ಹಲವರು ಸಾಮಾಜಿಕ ಸೇವೆ ನೀಡಿರುವ ಸಂಸ್ಥೆ, ಅದರಲ್ಲಿರುವ ಎಲ್ಲಾ ಯೋಜನೆಗಳು ಅತ್ಯಂತ ಯಶಸ್ವಿಯಗಿ ನಡೆಯಲೆಂದು ಶುಭ ಹಾರೈಸಿದರು. ಸಂಸ್ಥೆಯ ಸಂಯೋಜಕ ಪತ್ರಕರ್ತ ಇಕ್ಬಾಲ್‌ ಬಾಳಿಲ ಮುಂದಿನ ಯೋಜನೆಯ ಬಗ್ಗೆ ತರಬೇತಿ ನೀಡಿದರು. ಹುಸ್ಮಾನ್‌ ಸಾಹೇಬ್‌ ಕೋಡಿ ಪ್ರಾಸ್ತಾವಿಕವಾಗಿ ನುಡಿದು ಸಂಸ್ಥೆಯ ಜೊತೆ ಕೈ ಜೋಡಿಸಲು ಕೆರೆ ನೀಡಿದರು. 2014ರಲ್ಲಿ ಅಂತರಾಷ್ಟ್ರೀಯ ನಲ್ಸೆಲ್‌ ಮಂಡೇಲಾ ಹಾಗೂ ನೇಪಾಳ ಸದ್ಭಾವನ ಪ್ರಶಸ್ತಿ ಪಡೆದ ಸ್ಪಂದನ ಗೌರವಾಧ್ಯಕ್ಷ ಶಶಿಕಾಂತ ಮಣಿ ಸ್ವಾಮೀಜಿ ಅವರಿಗೆ ಸನ್ಮಾನ ಮಾಡಲಾಯಿತು.

ಬಳಿಕ ಇತ್ತೀಚೆಗೆ ಪತ್ರಿಕೆಯಲ್ಲಿ ಪ್ರಕಟವಾದ ಗುದದ್ವಾರ ಇಲ್ಲದ ಮಗುವಿನ ಕುಟುಂಬಕ್ಕೆ ಸಹಾಯವನ್ನು ನೀಡಲಾಯಿತು. ಹಾಗೂ ಕಳೆದ ಬಾರಿಯ ಪ್ರತಿನಿಧಿಗಳಿಗೆ ಪ್ರಮಾಣಪತ್ರ ಕೊಡಲಾಯಿತು.

ರಿಯಾಝ್ ಕೋಡಿ ಸ್ವಾಗತಿಸಿ. ಮಂಜುನಾಥ ವಂದಿಸಿದರು. ವಿಜೇಂದ್ರ ಹಟ್ಟಿಕುದ್ರು ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com