ಜಿಲ್ಲಾ ಮಟ್ಟದ ನಕ್ಷತ್ರ ಚಿತ್ರಕಲಾ ಉತ್ಸವ ಉದ್ಘಾಟನೆ

ಕುಂದಾಪುರ: ಕನ್ನಡತನ ಉಳಿಸುವ ನಿಟ್ಟಿನಲ್ಲಿ ಕನ್ನಡ ವೇದಿಕೆ ಕುಂದಾಪುರ ನವೆಂಬರ್ ತಿಂಗಳಿಡೀ ಕನ್ನಡ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಆರಂಭಿಕವಾಗಿ ಕನ್ನಡ ಭಾಷೆಯ ಆಶಯದೊಂದಿಗೆ ಚಿತ್ರಕಲೆ ಸ್ಪರ್ಧೆ ಆಯೋಜಿಸಿರುವುದು ಉತ್ತಮ ನಡೆ. ಮಕ್ಕಳಲ್ಲಿ ಭಾಷೆ, ನಾಡಿನ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಕುಂದೇಶ್ವರ ದೇವಸ್ಥಾನದ ವ್ಯವ ಸ್ಥಾಪನಾ ಸಮಿತಿ ಅಧ್ಯಕ್ಷ ವಿ. ರಾಜಗೋಪಾಲ ಹೊಳ್ಳ ಹೇಳಿದರು. 

ಭಾನುವಾರ ಇಲ್ಲಿನ ಕುಂದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಕನ್ನಡ ವೇದಿಕೆ ಕುಂದಾಪುರ ನಕ್ಷತ್ರ ಜುವೆಲ್ಲರ್ಸ್‌ ಸಹಯೋಗದೊಂದಿಗೆ ಕನ್ನಡ ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡ ಉಡುಪಿ ಜಿಲ್ಲಾ ಮಟ್ಟದ ನಕ್ಷತ್ರ ಚಿತ್ರಕಲಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. 

ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಭರತನಾಟ್ಯ ವಿದುಷಿ ಪ್ರವಿತಾ ಅಶೋಕ್, ಸಾಧನಾ ಕಲಾ ಕೇಂದ್ರದ ಸಂಚಾಲಕ ನಾರಾಯಣ ಐತಾಳ್, ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಭೋಜು ಹಾಂಡ, ಕನ್ನಡ ವೇದಿಕೆ ಉಪಾಧ್ಯಕ್ಷ ಸದಾನಂದ ಬೈಂದೂರು ಉಪಸ್ಥಿತರಿದ್ದರು. 

ಕನ್ನಡ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತು ಗಳನ್ನಾಡಿ,ಕನ್ನಡದ ಮನಸ್ಸನ್ನು ಒಂದು ಗೂಡಿಸುವ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ. ಅದರ ಭಾಗವಾಗಿ ಮೊದಲ ಕಾರ್ಯಕ್ರಮವಿದು. ಕನ್ನಡ ಬರೀ ಭಾಷೆ ಅಷ್ಟೇ ಅಲ್ಲ , ಅದೊಂದು ಸಂಸ್ಕೃತಿ ಅನ್ನುವುದನ್ನು ತಿಳಿಯ ಪಡಿಸುವ ಈ ಪ್ರಯತ್ನಕ್ಕೆ ಸರ್ವರ ಪ್ರೋತ್ಸಾಹ ಅಗತ್ಯ ಎಂದರು. ಕಾರ‌್ಯದರ್ಶಿ ಉದಯ ಗಾಂವ್ಕರ್ ಕಾರ‌್ಯಕ್ರಮ ನಿರ್ವಹಿಸಿದರು. ಪ್ರಶಾಂತ್ ತೆಕ್ಕಟ್ಟೆ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com