ನವೆಂಬರ್: ಕನ್ನಡ ಮಾಸಾಚರಣೆ - ಡಿಂಡಿಮ ಕಾರ್ಯಕ್ರಮ

ಕುಂದಾಪುರ: ಕನ್ನಡದ ವಾತಾವರಣ ಮೂಡಿಸುವ, ಕನ್ನಡದ ಮನಸ್ಸುಗಳನ್ನು ಒಂದುಗೂಡಿಸುವ ಪ್ರಯತ್ನದ ಪುಟ್ಟ ಭಾಗವಾಗಿ ಕುಂದಾಪುರದಲ್ಲಿ ನವಂಬರ್ ತಿಂಗಳಿಡಿ ಕನ್ನಡ ಮಾಸಾಚರಣೆ ಕನ್ನಡ ಡಿಂಡಿಮ- 2014 ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ತಿಳಿಸಿದರು. 

ಶುಕ್ರವಾರ ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ನ.1ರಂದು ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ಸಿಗಲಿದೆ. ಮಧ್ಯಾಹ್ನ 2.30ಕ್ಕೆೆ ಕುಂದಾಪುರದ ಸಾಯಿ ಸೆಂಟರ್ ಸಂಕೀರ್ಣ ಕನ್ನಡಮಯಗೊಳಿಸಿ ನಂತರ ಕನ್ನಡದ ಮೆರವಣಿಗೆ ನಡೆಯಲಿದೆ. ಸಂಜೆ 4ಗಂಟೆಗೆ ಕನ್ನಡ ಡಿಂಡಿಮ ಉದ್ಘಾಟನೆ ನೆರವೇರಲಿದೆ. ಬಳಿಕ ನವಂಬರ್ ತಿಂಗಳ ಪ್ರತಿ ಭಾನುವಾರ ಕನ್ನಡ ನುಡಿ, ಸಂಸ್ಕೃತಿ ಕುರಿತು ವೈವಿಧ್ಯಮ ಕಾರ್ಯಕ್ರಮ ನಡೆಯಲಿದೆ ಎಂದರು. 

ಅದರೊಂದಿಗೆ ನುಡಿಗೌರವ, ಕನ್ನಡ ಗೀತ ದರ್ಶನ, ಕನ್ನಡ ಕಷಿ ಮಾತುಕತೆ, ಸುಗಮ ಸಂಗೀತ, ಯಕ್ಷಗಾನ ತಾಳಮದ್ದಳೆ, ನತ್ಯವೈವಿಧ್ಯ, ನಾಟಕ, ಹಾಸ್ಯ, ಜಾದೂಪ್ರದರ್ಶನ, ಸಾಂಸ್ಕೃತಿಕ ರಸೋಲ್ಲಾಸ, ಹೌಂದರಾಯನ ಓಲಗ, ಕಾವ್ಯರಂಗ ಮೊದಲಾದ ವಿಶಿಷ್ಟ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. 

ನ.1ರಂದು ಸಂಜೆ 4.30 ಗಂಟೆಗೆ ಸಾಹಿತಿ ಡಾ.ಜಯಪ್ರಕಾಶ್ ಮಾವಿನಕುಳಿ ಕನ್ನಡ ಡಿಂಡಿಮ ಉದ್ಘಾಟಿಸುವರು. ನ.30ರಂದು ಸಂಜೆ 4.30ಗಂಟೆಗೆ ಸಮಾರೋಪ ನಡೆಯಲಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಸಮಾರೋಪ ನುಡಿಗಳನ್ನಾಡುವರು. ಎಲ್ಲಾ ಕಾರ್ಯಕ್ರಮಗಳು ಕುಂದಾಪುರ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆಯಲಿದೆ ಎಂದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com