‘ಮಧುರ ಮಧುರವೀ ಮಂಜುಳಗಾನ’ ಸಂಪನ್ನ

ಕೋಟೇಶ್ವರ: ದೂರದರ್ಶನ ಬೆಂಗಳೂರು, ಯುವ ಮೆರಿಡಿಯನ್ ಕನ್‌ವೆನ್ಸನ್ ಸೆಂಟರ್ ಕೋಟೇಶ್ವರ, ಯುವ ಇನ್‌ಫ್ರಾಸ್ಟಕ್ಚರ್ ಕುಂದಾಪುರ, ಬೈಲೂರು ಎಜುಕೇಶನ್ ಟ್ರಸ್ಟ್ ಕುಂದಾಪುರ ಸಂಯುಕ್ತ ಆಶ್ರಯದಲ್ಲಿ ಕೋಟೇಶ್ವರ ಯುವ ಮೆರಿಡಿಯನ್ ಹಾಲ್‌ನಲ್ಲಿ ಭಾನುವಾರ ನಡೆದ 'ಮಧುರ ಮಧುರವೀ ಮಂಜುಳಗಾನ' ಕಾರ್ಯಕ್ರಮವನ್ನು ಹಿರಿಯ ನಟ ಡಾ.ಶ್ರೀನಾಥ್ ಉದ್ಘಾಟಿಸಿದರು. 

ಉಡುಪಿ ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ, ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಮಾಜಿ ಶಾಸಕ ಯು.ಆರ್.ಸಭಾಪತಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ ವಿ.ಪಾಟೀಲ್, ರೋಟರಿ ಸಹಾಯಕ ಗವರ್ನರ್ ಗಣೇಶ್ ಶೆಟ್ಟಿ, ಸಾಹಿತಿ ಕೋಟೇಶ್ವರ ಸೂರ್ಯ ನಾರಾಯಣ ರಾವ್, ಉದ್ಯಮಿ ಪ್ರಶಾಂತ್ ತೋಳಾರ್, ಆನೆಗುಡ್ಡೆ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಸೂರ್ಯ ನಾರಾಯಣ ಉಪಾಧ್ಯಾಯ, ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾರ್ಯದರ್ಶಿ ಗೋಪಾಲಕಷ್ಣ ಹೊಳ್ಳ,ಉದ್ಯಮಿ ಗಣೇಶ ರಾವ್, ಬೈಲೂರು ಎಜುಕೇಶನ್ ಟ್ರಸ್ಟ್‌ನ ವಿನಯಕುಮಾರ ಶೆಟ್ಟಿ, ಜಯಕರ ಶೆಟ್ಟಿ, ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಎನ್.ಚಂದ್ರಶೇಖರ್ ಉಪಸ್ಥಿ ತರಿದ್ದರು. 

ಬೈಲೂರು ಎಜುಕೇಶನ್ ಟ್ರಸ್ಟ್‌ನ ಉದಯಕುಮಾರ ಶೆಟ್ಟಿ ಸ್ವಾಗತಿಸಿದರು. ದೂರದರ್ಶನ ದಕ್ಷಿಣ ವಲಯದ ಹೆಚ್ಚುವರಿ ಮಹಾನಿರ್ದೇಶಕ ಡಾ.ಮಹೇಶ್ ಜೋಶಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂದಾಪುರದಲ್ಲಿ 2ನೇ ಬಾರಿಗೆ ನಡೆಯುತ್ತಿರುವ ಕಾರ್ಯಕ್ರಮ ಸಂಪೂರ್ಣವಾಗಿ ಸ್ಥಳೀಯ ಯುವ ಪ್ರತಿಭೆಗಳಿಗೆ ಮೀಸಲಿಡಲಾಗಿದೆ ಎಂದರು. 

ಎ.ನಾರಾಯಣಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಗಾಯಕರು, ನೃತ್ಯ ತಂಡಗಳ ಪ್ರದರ್ಶನ ನಡೆಯಿತು. ಸಹಸ್ರಾರು ಪ್ರೇಕ್ಷಕರು ವೀಕ್ಷಣೆಗೆ ಆಗಮಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com