'ಮಣ್ಣಿನ ಆಟ' ಸಮಾರೋಪ

ಕುಂದಾಪುರ: ಕಲೆ ವ್ಯಕ್ತಿತ್ವವನ್ನು ಪರಿಚಯಿಸಿ, ಸಮಾಜದಲ್ಲಿನ ನ್ಯೂನತೆಗಳನ್ನು ಪ್ರತಿಬಿಂಬಿಸುತ್ತಾ ಜೀವನವನ್ನು ಅವಲೋಕಿಸುತ್ತದೆ. ಇದನ್ನು ಕಲಾವಿದನೆಂಬ ಶ್ರೇಷ್ಟ ವ್ಯಕ್ತಿಯಿಂದ ಮಾತ್ರ ಸಾಧ್ಯ. ಎಂದು ಕುಂದಾಪುರ ಭಂಡಾಕಾರ್ಸ ಕಾಲೇಜಿನ ಇಂಗ್ಲೀಷ್‌ ವಿಬಾಗದ ಮುಖ್ಯಸ್ಥರಾದ ಡಾ| ಪಾರ್ವತಿ ಜಿ. ಐತಾಳ್‌ ಹೇಳಿದರು.

ಅವರು ರೋಟರಿ ಕ್ಲಬ್‌ ಕುಂದಾಪುರ ಮತ್ತು ತ್ರಿವರ್ಣ ಕಲಾ ಕೇಂದ್ರವು ರೋಟರಿ ಕ್ಲಬ್‌ ಕುಂದಾಪುರದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ಆವೆಮಣ್ಣಿನ ಕೃತಿ ರಚನಾ ಶಿಬಿರವಾದ 'ಮಣ್ಣಿನ ಆಟ-2014' ಸಮಾರೋಪ ಸಮಾರಂಭದಲ್ಲಿ ನೆರೆದ ಪೋಷಕಕರು ಮತ್ತು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಭ್‌ ಕುಂದಾಪುರದ ಝೋನಲ್‌ ಕೋ ಆರ್ಡಿನೇಟರ್‌ ರೋ. ಕೆ.ಆರ್‌.ನಾಯ್ಕ, ಅಧ್ಯಕ್ಷ ಮನೋಜ್‌ ನಾಯರ್‌, ಕಾರ್ಯದರ್ಶಿ ರೋ. ಕೆ.ವಿ. ನಾಯ್ಕ, ತ್ರಿವರ್ಣ ಕಲಾ ಕೇಂದ್ರದ ಮುಖ್ಯಸ್ಥ, ಕಲಾವಿದ ಹರೀಶ್‌ ಸಾಗಾ ವೇದಿಕೆಯಲ್ಲಿ ಉಪಸ್ಥಿತಲಿದ್ದರು.

ಎಕ್ಸಲೆಂಟ್‌ ಪಿ.ಯು ಕಾಲೇಜಿನ ಉಪನ್ಯಾಸಕಿ ಸೌಮ್ಯಾ ಕೆ. ಕಾರ್ಯಕ್ರಮ ನಿರೂಪಿಸಿದರು.  ಕಲಾವಿದ್ಯಾರ್ಥಿ ಪ್ರಣೀತಾ ವಂದನಾರ್ಪಣೆಗೈದರು

ಮಣ್ಣಿನ ಆಟದಲ್ಲಿ ವೈವಿಧ್ಯತೆಯುಳ್ಳ 100ಕ್ಕೂ ಅಧಿಕ ಕಲಾಕೃತಿಗಳು ಮೂಡಿ ಬಂದಿದ್ದು, ಸಂಪನ್ಮೂಲ ಕಲಾವಿದರಾಗಿ ಬೆಳ್ತಂಗಡಿಯ ಗಣೇಶ್‌ ಮಂದಾರ, ಉಡುಪಿಯ ಬಾಲು ಅಂಬಾಗಿಲು ಕಲೆಯ ವಿವಿಧ ಪ್ರಕಾರಗಳನ್ನು ತಿಳಿಯ ಪಡಿಸಿ ಭಾಗವಹಿಸಿದ್ದ 41 ಹಿರಿಯ, ಕಿರಿಯ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನಗೆ„ದಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com