ಅ. 16: ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ಭೇಟಿ

ಬೈಂದೂರು: ರಾಜ್ಯ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯು ಅ. 16ರ ಬೆಳಿಗ್ಗೆ 8:30ಕ್ಕೆ ಮರವಂತೆ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಲಿದೆ. ಈ ಸಂದರ್ಭದಲ್ಲಿ ಮರವಂತೆ ಗ್ರಾಮ ಪಂಚಾಯತ್ ಸಾಧನೆಗಳ ಪರಿಚಯ ಮಾಡಿಕೊಳ್ಳಲಿರುವ ಸಮಿತಿಯು, ಗ್ರಾಮ ಪಂಚಾಯತ್‌ಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲಿದೆ. 
  ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆಯ ಈ ಸಮಿತಿಯಲ್ಲಿ ವಿಧಾನ ಸಭೆಯ ಸದಸ್ಯರಾದ ವಾಸು, ಸಿ. ಎಸ್. ಶಿವಳ್ಳಿ, ಬಿ. ಬಿ. ಚಿಮ್ಮನಕಟ್ಟಿ, ಎಸ್. ಜಯಣ್ಣ, ಆರ್. ನರೇಂದ್ರ, ಟಿ. ವೆಂಕಟರಮಣಯ್ಯ, ಬಿ. ಜಿ. ಗೋವಿಂದಪ್ಪ, ರಾಜಾ ವೆಂಕಟಪ್ಪ ನಾಯಕ್, ಡಿ. ಎನ್. ಜೀವರಾಜ್, ಯು. ಬಿ. ಬಣಕಾರ್, ಜಿ. ಎಚ್. ತಿಪ್ಪಾರೆಡ್ಡಿ, ಎಂ. ಟಿ. ಕೃಷ್ಣಪ್ಪ, ಸಾ. ರಾ. ಮಹೇಶ್, ಎಂ. ಜೆ. ಅಪ್ಪಾಜಿ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಆಚಾರ್ ಹಾಲಪ್ಪ ಬಸಪ್ಪ, ಜಿ. ಎಸ್. ನ್ಯಾಮ ಗೌಡ, ಮಹಾಂತೇಶ ಮಲ್ಲಿಕಾರ್ಜುನ ಕವಟಗಿಮಠ, ಮಾನೆ ಶ್ರೀನಿವಾಸ  ಸದಸ್ಯರಾಗಿದ್ದಾರೆ. 
 ಸಮಿತಿಯ ಸದಸ್ಯರು ಬುಧವಾರ ಮಂಗಳೂರು ಮೂಲಕ ಕುಂದಾಪುರಕ್ಕೆ ಬಂದು ತಂಗುವರು. ಗುರುವಾರ ಬೆಳಿಗ್ಗೆ ಕೊಲ್ಲೂರು ದೇವಸ್ಥಾನ ಸಂದರ್ಶಿಸಿ, ಮರವಂತೆ, ಕೋಟದ ಡಾ. ಶಿವರಾಮ ಕಾರಂತ ಥೀಮ್‌ಪಾರ್ಕ್‌ಗೆ ಭೇಟಿಯಿತ್ತು, ೧೧ ಗಂಟೆಗೆ ಉಡುಪಿ ರಜತಾದ್ರಿಯ ಅಟಲ್‌ಜಿ ಸಭಾಂಗಣದಲ್ಲಿ ಸಭೆ ನಡೆಸುವರು. ಅಪರಾಹ್ನ ೩ಕ್ಕೆ ಮಾಧ್ಯಮದವರ ಜತೆ ಮಾತನಾಡಿ, ಮಂಗಳೂರು ಮೂಲಕ ಬೆಂಗಳೂರಿಗೆ ತೆರಳುವರು ಎಂಬ ಮಾಹಿತಿ ಲಭ್ಯವಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com