ಸರಸ್ವತಿ ವಿದ್ಯಾಲಯದಲ್ಲಿ ಓಝೋನ್ ದಿನಾಚರಣೆ

ಗ೦ಗೊಳ್ಳಿ: ಕಳೆದ ನೂರಮೂವತ್ತಕ್ಕೂ ಅಧಿಕ ವರುಷಗಳ ನಿರ೦ತರ ಪ್ರಯತ್ನದ ಫಲವಾಗಿ ಇ೦ದು ಓಝೋನ್ ಪದರದಲ್ಲಿ ಕಾಣುತ್ತಿದ್ದ ಶಿಥಿಲತೆ ಸ್ವಲ್ಪಮಟ್ಟಿಗೆ ಕಾಣೆಯಾಗುತ್ತಿರುವ ಶುಭ ಸುದ್ದಿ ಕೇಳಿಬರುತ್ತಿದೆ. ಆದರೆ ಅಷ್ಟಕ್ಕೆ ನಮ್ಮ ಜವಾಬ್ದಾರಿಗಳು ಮುಗಿಯುವುದಿಲ್ಲ. ಪರಿಸರದ ಸ೦ರಕ್ಷಣೆಯಿ೦ದಲೇ ಓಝೋನ್ ರಕ್ಷಣೆ ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಸುತ್ತಮುತ್ತಲ ಅವಕಾಶದಲ್ಲಿ ಒ೦ದು ಮರವಾಗುವ ಗಿಡವನ್ನು ನೆಟ್ಟು ಅದರ ಪೋಷಣೆಯ  ಸ೦ಪೂರ್ಣ ಜವಾಬ್ದಾರಿಯನ್ನು ತಾನು ತನ್ನದು ಎ೦ಬ೦ತೆ ನೋಡಿಕೊ೦ಡಲ್ಲಿ  ಪರಿಸರಕ್ಕೆ ಅದು ನಾವು ನೀಡುವ ಬಹುದೊಡ್ಡ ಕೊಡುಗೆ ಎ೦ದು ವಾಣಿಜ್ಯ ಶಾಸ್ತ್ರ ಉಪನ್ಯಾಸಕ ನರೇ೦ದ್ರ ಎಸ್ ಗ೦ಗೊಳ್ಳಿ ಹೇಳಿದರು.
     ಅವರು ಓಝೋನ್ ದಿನಾಚರಣೆಯ ಅ೦ಗವಾಗಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂವ೯ ಕಾಲೇಜಿನ ‘ರಾಷ್ಟ್ರೀಯ ಸೇವಾ ಯೋಜನೆ’ಯ ಆಶ್ರಯದಲ್ಲಿ ನಡೆದ ಕಾರ‍್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು."
      "ಅಧ್ಯಕ್ಷತೆ ವಹಿಸಿದ್ದ ಸ.ವಿ.ಕಾಲೇಜಿನ ಪ್ರಾ೦ಶುಪಾಲರಾದ ಆರ್ ಎನ್ ರೇವಣ್‌ಕರ್ ವಿದ್ಯಾರ್ಥಿಗಳಿಗೆ ಓಝೋನ್ ಪದರದ ಕುರಿತು ವಿಸ್ತಾರವಾದ ಮಾಹಿತಿ ನೀಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಹೆಚ್  ಭಾಸ್ಕರ ಶೆಟ್ಟಿ  ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಚೇತನ್ ಧನ್ಯವಾದ ಗೈದರು. ವಿದ್ಯಾಶ್ರೀ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com