ಕೊರಗ ಸಂಘಟನೆಯಿಂದ ಎಸಿ ಕಚೇರಿ ಎದುರು ಪ್ರತಿಭಟನೆ

ಕುಂದಾಪುರ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ, ಕೊರಗರ ತಾಲೂಕು ಸಮಿತಿ ಕುಂದಾಪುರ ವತಿಯಿಂದ ತಾಲೂಕಿನಾದ್ಯಂತ ಕೊರಗ ಸಮುದಾಯವನ್ನು ಸರಕಾರ ನಿರ್ಲಕ್ಷಿಸುತ್ತಿರುವುದನ್ನು ವಿರೋಧಿಸಿ ಕುಂದಾಪುರ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಅ. 7ರಂದು ಪ್ರತಿಭಟನೆ ನಡೆಸಲಾಯಿತು.

ಮೂರು ತಿಂಗಳಿಂದ ಸತತವಾಗಿ ಗ್ರಾ.ಪಂ. ಮಟ್ಟದಲ್ಲಿ ಹಾಗೂ ಕೆರಾಡಿ, ವಂಡ್ಸೆ, ಕೊಲ್ಲೂರು, ಹಟ್ಟಿಯಂಗಡಿ, ಕರ್ಕುಂಜೆ, ತಲ್ಲೂರು, ಶಂಕರನಾರಾಯಣ, ಹಾರ್ದಳ್ಳಿ ಮಂಡಳ್ಳಿ, ಕಾಳಾವರ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸೆಲಾಗಿದ್ದರೂ ಹಾಗೂ ವಂಡ್ಸೆ ಗ್ರಾ.ಪಂ. ಎದುರು ಮೂರು ತಿಂಗಳ ನಿರಂತರ ಧರಣಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಕಾರರು ಹೇಳಿದ್ದಾರೆ.

ಸರಕಾರಿ ಜಾಗದಲ್ಲಿ ಕುಳಿತವರಿಗೆ ಹಕ್ಕು ಪತ್ರ ನೀಡಬೇಕು, ಕುಂದಾಪುರ ತಾಲೂಕಿನಲ್ಲಿ ಭೂಮಿಗೆ ಸಂಬಂಧಿಸಿ ಕಂದಾಯ ಇಲಾಖೆಯಿಂದ ಸರ್ವೇ ನಡೆಸಿ ಕುಟುಂಬವೊಂದಕ್ಕೆ ಕನಿಷ್ಠ ಎರಡೂವರೆ ಎಕ್ರೆ ಭೂಮಿ ಮಂಜೂರು ಮಾಡಬೇಕು, ಇದಕ್ಕಾಗಿ ಕಾದಿರಿಸಿದ ಡಿಸಿ ಮನ್ನಾ ಭೂಮಿ, ಒತ್ತುವರಿ ಭೂಮಿ ತೆರವುಗೊಳಿಸಿ ಭೂ ಬ್ಯಾಂಕ್‌ ಮಾಡಿಕೊಳ್ಳಬೇಕು ಎಂದು ಅವರು ಈ ಸಂದರ್ಭ ಉಪವಿಭಾಗಾಧಿಕಾರಿ ಮೂಲಕ ಸರಕಾರವನ್ನು ಒತ್ತಾಯಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com