ಭೂಮಿ ಹಕ್ಕು ಆಗ್ರಹಿಸಿ ಕೊರಗರ ಪ್ರತಿಭಟನೆ

ಕುಂದಾಪುರ: ಭೂಮಿ ಹಕ್ಕು ಆಗ್ರಹಿಸಿ ಹೆಮ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಗ ಕುಟುಂಬಗಳು ಸೋಮವಾರ ಹೆಮ್ಮಾಡಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 

ಕೊರಗಾಭಿವದ್ಧಿ ಸಂಘದ ಅಧ್ಯಕ್ಷ ಸುರೇಶ್ ಕೊರಗ ಮಾತನಾಡಿ ಹೆಮ್ಮಾಡಿ ಗ್ರಾಮದ ಸಂತೋಷನಗರ, ಕಟ್‌ಬೆಲ್ತೂರು ಮತ್ತು ಜಾಡಿಯಲ್ಲಿ ನೆಲೆಸಿರುವ 22 ಕೊರಗ ಕುಟುಂಬಗಳಿಗೆ ಈವರೆಗೆ ಭೂಮಿ ಹಕ್ಕು ನೀಡದೆ ವಂಚಿಸಲಾಗಿದೆ. ಸೂಕ್ತ ಮೂಲಭೂತ ಸೌಕರ್ಯ ಇಲ್ಲದೆ ಕೊರಗರು ಸಂಕಷ್ಟಕ್ಕೀಡಾಗಿದ್ದಾರೆ. ಭೂಮಿ ಹಕ್ಕು ಸಿಗದ ಕಾರಣ ಸರಕಾರಿ ಸವಲತ್ತು ಸಹ ಪಡೆಯಲು ವಿಫಲರಾಗಿದ್ದಾರೆ. ತಾಲೂಕು ಆಡಳಿತ ಗಮನಹರಿಸಿ ಭೂಮಿ ಹಕ್ಕು ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com