ಉಚಿತ ಕೃತಕ ಕೈಕಾಲು ಜೋಡಣೆಗೆ ಆಹ್ವಾನ

ಕುಂದಾಪುರ: ಭಾರತ ವಿಕಾಸ ಪರಿಷತ್, ಪರಶುರಾಮ ಶಾಖೆ, ಕೋಟೇಶ್ವರದ ಆಶ್ರಯದಲ್ಲಿ ರಾಮಕೃಷ್ಣ ಆಶ್ರಮ ಹಲಸೂರು ಮಠದ ಸ್ವಾಮೀಜಿ ಶ್ರೀ ತ್ಯಾಗೀಶ್ವರಾನಂದಜೀ ಮಹಾರಾಜ್ ಹಾಗೂ ರಾಮಕೃಷ್ಣ ಆಶ್ರಮ ಮಂಗಳೂರು ಮಠದ ಸ್ವಾಮೀಜಿ ಶ್ರೀ ಜಿತಕಾಮಾನಂದಜೀ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲೆಯ ಅರ್ಹರಿಗೆ ಕೃತಕ ಕೈಕಾಲು ಜೋಡಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
    ಸಂಪೂರ್ಣ ಉಚಿತವಾಗಿ ಕೃತಕ ಕೈಕಾಲುಗಳನ್ನು ಅರ್ಹರಿಗೆ ಜೋಡಿಸಲಿದ್ದು, ಆಸಕ್ತರು ತಮ್ಮ ಫೋಟೋ ವಿವರಗಳೊಂದಿಗೆ ಅರ್ಜಿಯನ್ನು ಅಕ್ಟೋಬರ್ ೩೦ರೊಳಗೆ ಕಳುಹಿಸಬೇಕಾಗಿದೆ. ಅರ್ಜಿಯ ಆಧಾರದ ಮೇಲೆ ಫಲಾನುಭವಿಗಳನ್ನು ಮುಖತಃ ಭೇಟಿ ಮಾಡಿ, ಪರಿಶೀಲಿಸಿದ ಬಳಿಕ ಅವರಿಗೆ ಕೃತಕ ಕೈಕಾಲು ಜೋಡಣೆಯ ಶಿಬಿರದಲ್ಲಿ ಭಾಗವಹಿಸಲು ಅವಕಾಶ ನೀಡಿ ಅದರ ಸಂಪೂರ್ಣ ವೆಚ್ಚವನ್ನು ಭರಿಸಲಾಗುವುದು. ಅರ್ಜಿಯನ್ನು ಚಂದ್ರ ಮೋಹನ್ ಧನ್ಯ ’ಸಂಸ್ಥಾನಂ’ ಧನ್ಯ ನರ್ಸರಿ ಕೋಟೇಶ್ವರ ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಚಂದ್ರಮೋಹನ ಧನ್ಯ ೯೪೪೮೪೬೧೦೪೪, ಸುಕೇಶ್ ಶೇಟ್ ೯೮೪೪೬೧೫೧೪೬, ಯೋಗೀಶ್ ೮೭೬೨೪೧೮೬೪೦ನ್ನು ಸಂರ್ಕಿಸಬಹುದಾಗಿದೆ.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com