ಡಿಕೆ ಕೊಳೆರೋಗದ ಪರಿಹಾರ ವಿತರಣೆ ವಂಚನೆ: ತನಿಖೆಗೆ ಮನವಿ

ಕುಂದಾಪುರ: ಕರಾವಳಿ ಹಾಗೂ ಮಲೆನಾಡಿನಾದ್ಯಂತ 2013ರ ಮಳೆಗಾಲದಲ್ಲಿ ಅಡಿಕೆ ತೋಟಗಳಿಗೆ ವಿಪರೀತ ಕೊಳೆರೋಗ ಕಾಣಿಸಿಕೊಂಡಿದ್ದು, ಸರಕಾರ ನೀಡಿದ ಪರಿಹಾರ ವಿತರಣೆಯಲ್ಲಿ ವಂಚನೆ ನಡೆದಿದೆ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಕುಂದಾಪುರ ತಾಲೂಕು ಭಾಕಿಸಂ ಕುಂದಾಪುರ ಸಹಾಯಕ ಕಮೀಷನರ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಅಡಿಕೆ ಬೆಳೆಗಾರರಿಗೆ ಕೊಳೆರೋಗದಿಂದ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿ ಒಂದು ವರ್ಷದ ಸಂಪೂರ್ಣ ಆದಾಯವೇ ಇಲ್ಲದಂತಾದಾಗ ಭಾರತೀಯ ಕಿಸಾನ್‌ ಸಂಘ, ಮೊದಲ ಬಾರಿಗೆ ಸರಕಾರದಿಂದ ವೈಜ್ಞಾನಿಕ ದರದಲ್ಲಿ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿಕೊಂಡಿತ್ತು.

ಆದರೆ ಕುಂದಾಪುರದ ಅಡಿಕೆ ಬೆಳೆಗಾರರಿಂದ ನಮಗೆ ಬಂದ ಅರ್ಜಿಗಳ ಪೈಕಿ, ಸುಮಾರು 240 ಅರ್ಜಿಗಳಿಗೆ ಈವರೆಗೂ ಪರಿಹಾರ ನೀಡಿರುವುದಿಲ್ಲ. ಈ ಪರಿಹಾರ ಹಂಚಿಕೆಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ರೈತರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಭಾ.ಕಿ.ಸಂ. ಮಾಹಿತಿಯನ್ನು ಪಡೆದು ಪರಿಶೀಲಿಸಿದಾಗ ದೊಡ್ಡ ಪ್ರಮಾಣದಲ್ಲಿ ಈ ಪರಿಹಾರದ ಹಣವನ್ನು ನೀಡುವಲ್ಲಿ ಅವ್ಯವಹಾರ ನಡೆದಿರುವುದನ್ನು ದಾಖಲೆಗಳಿಂದ ನಾವು ಕಂಡುಕೊಂಡಿದ್ದೇವೆ ಎಮದು ಮನವಿಯಲ್ಲಿ ತಿಳಿಸಲಾಗಿದೆ.

ಈ ಎಲ್ಲಾ ವಿಚಾರಗಳನ್ನು ದಾಖಲೆಗಳೊಂದಿಗೆ ಕುಂದಾಪುರದ ಸಹಾಯಕ ಕಮೀಷನರ್‌ ಚಾರುಲತಾ ಅವರನ್ನು ಭೇಟಿಯಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮತ್ತು ಇನ್ನೂ ಪರಿಹಾರ ಪಡೆಯಲು ಬಾಕಿಯಿರುವ ರೈತರಿಗೆ ನ್ಯಾಯಯುತವಾಗಿ ಪರಿಹಾರ ಒದಗಿಸಿ ಕೊಡುವಂತೆ ಭಾರತೀಯ ಕಿಸಾನ್‌ ಸಂಘ, ಕುಂದಾಪುರ ತಾಲೂಕು ಸಮಿತಿಯ ವತಿಯಿಂದ ಮನವಿ ಸಲ್ಲಿಸಲಾಯಿತು. 

ಭಾರತೀಯ ಕಿಸಾನ್‌ ಸಂಘದ ನೇತೃತ್ವವನ್ನು ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಐತಾಳ್‌, ಕ್ರೋಢಬೈಲೂರು ವಹಿಸಿದ್ದರು. ನಿಯೋಗದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಜಪ್ತಿ, ತಾಲೂಕಿನ ಪದಾಧಿಕಾರಿಗಳಾದ ವೆಂಕಟೇಶ್‌ ಹೆಬ್ಟಾರ್‌, ಹೊಸ್ಕೋಟೆ, ರಾಮಚಂದ್ರ ಅಲ್ಸೆ, ಬೆಳ್ವೆ, ಸೂರಪ್ಪ ಭಂಡಾರಿ, ಕೊರ್ಗಿ, ಸೀತಾರಾಮ ಗಾಣಿಗ, ಹಾಲಾಡಿ, ಚಂದ್ರಶೇಖರ ಉಡುಪ, ಕೆಂಚನೂರು ಮೊದಲಾದವರು ಭಾಗವಹಿಸಿದ್ದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com