ಸರಕಾರಿ ಆಸ್ವತ್ರೆಯ ಅವ್ಯವಸ್ಥೆಗೆ ಆರೋಗ್ಯ ಸಚಿವರೇ ಸಾಕ್ಷಿ

ಕುಂದಾಪುರದ ಸರಕಾರಿ ಆಸ್ವತ್ರೆಗೆ ದಿಡೀರ್ ಭೇಟಿ ನೀಡಿದ ವೇಳೆ ರೋಗಿಯ ಸಾವು ದೃಢೀಕರಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್

ಕುಂದಾಪುರ: ಸರಕಾರಿ ಆಸ್ವತ್ರೆಗಳಲ್ಲಿ ಹೇಳೊರು ಕೇಳೊರು ಯಾರು ಇರೊಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಆಸ್ವತ್ರೆಗೆ ದಾಖಲಾಗಿದ್ದ ರೋಗಿಯ ಸಾವನ್ನು ಸಚಿವರು ದೃಢೀಕರಿಸಿದ ಫಟನೆಯಿಂದ ಸಬೀತಾಗಿದೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ಕುಂದಾಪುರಕ್ಕೆ ಆಗಮಿಸಿದ್ದ  ಆರೋಗ್ಯ ಸಚಿವ ಯು.ಟಿ. ಖಾದರ್ ಶನಿವಾರ ರಾತ್ರಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ಮಾಹಿತಿ ಇಲ್ಲದೆ ಭೇಟಿ ನೀಡಿದ್ದರು.
    ರಾತ್ರಿ 8ಗಂಟೆ ಸುಮಾರಿಗೆ ಸಚಿವರು ಆಸ್ಪತ್ರೆಯ ಎಲ್ಲ ವಾರ್ಡ್ ವೀಕ್ಷಿಸಿ ಜನರಲ್ ವಾರ್ಡ್‌ಗೆ ಬಂದ ಸಚಿವರು ಉಬ್ಬಸ ಕಾಯಿಲೆಯಿಂದ ನರಳುತ್ತಿದ್ದ ಶೀನ (90) ಎಂಬವರ ಬೆಡ್‌ನತ್ತ ಆಗಮಿಸಿ ಸಂಶಯ ತಳೆದು ವ್ಯಕ್ತಿಯ ನಾಡಿಮಿಡಿತ ನೋಡಿ ರೋಗಿ ಕೊನೆಯುಸಿರೆಳೆದಂತೆ ತೋರುತ್ತಿದೆ ಒಮ್ಮೆ ಪರೀಕ್ಷಿಸಿ ಎಂದು ದಾದಿಗೆ ಸೂಚಿಸಿದರು. ಈ ವೇಳೆ ಡ್ಯೂಟಿ ಡಾಕ್ಟರ್ ಇದ್ದಿರಲಿಲ್ಲ. ಎಚ್ಚೆತ್ತ ದಾದಿ ಪರೀಕ್ಷಿಸಿದಾಗ ರೋಗಿ ಕೊನೆಯುಸಿರೆಳೆದಿರುವುದು ದೃಢಪಟ್ಟಿತು. ಬಳಿಕ ಆಗಮಿಸಿದ ವೈದ್ಯೆ ಡಾ.ಸವಿತಾ ಅವರಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲು ಸಚಿವರು ಸೂಚಿಸಿದರು. ವೈದ್ಯರ ನಿರ್ಲಕ್ಷ್ಯ ಕಂಡ  ಸಚಿವರು ವಿಷಾದ ವ್ಯಕ್ತಪಡಿಸಿದರು.
   ಆಸ್ಪತ್ರೆಗೆಯ ಹಾಜರಾತಿ ಪುಸ್ತಕ ಪರಿಶೀಲನೆ ನಡೆಸಿ ದ ಸಚಿವರು ಸಮರ್ಪಕವಾದ ಹಾಜರಾತಿಯಿರದ ಕಾರಣ ಗರಂ ಆಗಿದ್ದರು ಎಂದು ತಿಳಿದು ಬಂದಿದೆ. ಸಚಿವರನ್ನು ಕಂಡ ರೋಗಿಗಳು ಹಾಗೂ ಸಾರ್ವಜನಿಕರು ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ದೂರುವುದು ಕಂಡಬಂತು.
    ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಯೊಂದಿಗೆ ಮಾತನಾಡಿ ಸಮಸ್ಯೆ ಬಗೆ ಹರಿಸುವುದಾಗಿ ಸಚಿವ ಖಾದರ್‌ ಭರವಸೆ ನೀಡಿದದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com