ಉಡುಪಿ: 23 ಮಂದಿಗೆ ಉಡುಪಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ

ಉಡುಪಿ: ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಯಕ್ಷಗಾನ, ಕಲೆ, ನಾಟಕ, ಸಮಾಜ ಸೇವೆ, ಸಂಗೀತ, ವೈದ್ಯಕೀಯ, ಕಷಿ, ಕ್ರೀಡೆ, ಸಂಶೋಧನೆ ಹಾಗೂ ಗ್ರಾಮೀಣಾ ಭಿವದ್ಧಿ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಸಾಧನೆ ಮಾಡಿರುವ ಈ ಕೆಳಗೆ ತಿಳಿಸಿರುವ ವ್ಯಕ್ತಿಗಳನ್ನು 2014ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆಯಾದವರನ್ನು ನವೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ಉಡುಪಿ ಕುಂಜಿಬೆಟ್ಟುವಿನಲ್ಲಿರುವ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ ಕ್ರೀಡಾಂಗಣದಲ್ಲಿ (ಎಂಜಿಎಂ ಕಾಲೇಜು) ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಸನ್ಮಾನಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಎಸ್.ಎಸ್. ಪಟ್ಟಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

2014ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು


ಮುಳುಗುತಜ್ಞ ಮಂಜುನಾಥ ನಾಯ್ಕ್, ಕಣ್ನೇರಿ, ಕುಂದಾಪುರ ತಾಲೂಕು( ಸಮಾಜ ಸೇವೆ ಕ್ಷೇತ್ರ)
ವೆರೋನಿಕಾ ಕರ್ನೆಲಿಯೋ ಕೆಮ್ಮಣ್ಣು ಉಡುಪಿ (ಸಮಾಜ ಸೇವೆ) 
ಹಾಜಿ ಕೆ.ಅಬೂಬಕ್ಕರ್ ಕಬ್ಯಾಡಿ ಪರ್ಕಳ (ಸಮಾಜ ಸೇವೆ) 
ಗಣೇಶ್ ವಿ.ಕೊರಗ, ಕುಂದಾಪುರ(ಸಮಾಜ ಸೇವೆ ) 
ಡಾ.ಎಚ್. ಶಾಂತರಾಮ್, ಮಣಿಪಾಲ (ಶಿಕ್ಷಣ) 
ಮ್ಯಾಥ್ಯೂ ಸಿ. ನೀನಾನ್ ಬ್ರಹ್ಮಾವರ(ಶಿಕ್ಷಣ) 
ಹಾಜಿ ಮಾಸ್ಟರ್ ಮೊಹಮೂದ್ ಕೋಡಿ ಕುಂದಾಪುರ (ಶಿಕ್ಷಣ) 
ಬಿ.ಬಿ. ಶೆಟ್ಟಿಗಾರ್ ಉಡುಪಿ(ಪತ್ರಿಕೋದ್ಯಮ) 
ಲಕ್ಷ್ಮಣ ಸುವರ್ಣ, ರೂಪಂ ಸ್ಟುಡಿಯೋ ಕಾಪು(ಛಾಯಾಚಿತ್ರ ಗ್ರಾಹಕ) 
ನಾಗ ಶಿರೂರು,ಕರಂಗಲ್ಪಾಡಿ ಮಂಗಳೂರು (ಸಾಹಿತ್ಯ) 
ಅನುರಾಧ ಎ.ಪಿ. ಮಯ್ಯ(ಸಂಗೀತ) 
ಪವನ ಬಿ. ಆಚಾರ್ ಮಣಿಪಾಲ( ಸಂಗೀತ ಕ್ಷೇತ್ರ) 
ರಾಘವ ಶೇರಿಗಾರ್ ಅಲೆವೂರು(ಸ್ಯಾಕ್ಸೋಫೋನ್) 
ರಾಘವೇಂದ್ರ ಮಯ್ಯ ಹಾಲಾಡಿ ಕುಂದಾಪುರ(ಯಕ್ಷಗಾನ ಕ್ಷೇತ್ರ) 
ಕ್ರಿಯೇಟಿವ್ ಯೂತ್ ಕ್ಲಬ್, ಕೊಕ್ಕರ್ಣೆ, ಉಡುಪಿ (ಸಂಘ ಸಂಸ್ಥೆ). 
ಪ್ರೊ.ಎ.ರಾಜಾ ಎಂ.ಎಸ್., ನ್ಯೂರೋ ಸರ್ಜನ್ ಆದರ್ಶ ಆಸ್ಪತ್ರೆ, ಉಡುಪಿ(ವೈದ್ಯಕೀಯ) 
ಪೆರ್ಡೂರು ರತ್ನಾಕರ ಕಲ್ಯಾಣಿ, ಕುಂಜಿಬೆಟ್ಟು ಉಡುಪಿ, (ರಂಗಭೂಮಿ ಕ್ಷೇತ್ರ) 
ಸುನಿಲ್ ಕುಮಾರ್ ನೆಲ್ಲಿಗುಡ್ಡೆ, ಕಾರ್ಕಳ(ರಂಗಭೂಮಿ ಕ್ಷೇತ್ರ) 
ಕೆ.ಜಯಕಷ್ಣ ಹೆಗ್ಡೆ, ಕಾರ್ಕಳ, (ಕ್ರೀಡೆ ಕ್ಷೇತ್ರ) 
ಚಂದ್ರಯ್ಯ ಆಚಾರ್ಯ, ಕಳಿ ಆಲೂರು ಗ್ರಾಮ ಕುಂದಾಪುರ (ಶಿಲ್ಪಕಲೆ ಕ್ಷೇತ್ರ) 
ಭಾಸ್ಕರ್ ಶೆಟ್ಟಿ, ಕಷಿ ಕುಟೀರ ಮಣೂರು-ಪಡುಕೆರೆ ಗ್ರಾಮ ಕೋಟತಟ್ಟು, ಉಡುಪಿ (ಕೃಷಿ) 
ಬೊಗ್ಗು ಪರವ, ಮೂಡುಬೆಳ್ಳೆ ಉಡುಪಿ ( ದೈವನರ್ತನ), 
ಮನೋಹರ ಎಸ್.ಕುಂದರ್,(ಯಕ್ಷಗಾನ ಛಾಯಾಚಿತ್ರಗ್ರಾಹಕ ಕ್ಷೇತ್ರ). 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com