ಹಿರಿಯ ಪತ್ರಕರ್ತ ಎಂ.ವಿ.ಕಾಮತ್‌ ನಿಧನ


ಉಡುಪಿ: ಭಾರತೀಯ ಪತ್ರಿಕಾರಂಗದ ಮೇರು ವ್ಯಕ್ತಿತ್ವ, ಪದ್ಮಭೂಷಣ ಪುರಸ್ಕೃತ ಹಿರಿಯ ಪತ್ರಕರ್ತ, ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ಮಾಧವ ವಿಠ್ಠಲರಾವ ಕಾಮತ್ (ಎಂ.ವಿ ಕಾಮತ್) ಅಲ್ಪಕಾಲದ ಅಸೌಖ್ಯದಿಂದಾಗಿ ಇಂದು (ಗುರುವಾರ) ಬೆಳಿಗ್ಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.

   ಪ್ರಿ ಪ್ರೆಸ್ ಜರ್ನಲ್ ಮೂಲಕ  ಪತ್ರಿಕಾ ವೃತ್ತಿ  ಆರಂಭಿಸಿದ ಕಾಮತರು ಪಿ.ಟಿ.ಐ.ವರದಿಗಾರರಾಗಿ ದುಡಿದಿದ್ದರು. ಇಪ್ಪತ್ತು ವರ್ಷ ಯುನೈಟೆಡ್ ನೇಶನ್ಸ್‌ನ ಮುಖ್ಯ ಕಚೇರಿಯಲ್ಲಿದ್ದು ವರದಿ ಕಳುಹಿಸಿದ್ದುರು, ಟೈಮ್ಸ್ ಆಫ್ ಇಂಡಿಯಾದ ಪ್ರತಿನಿಧಿಯಾಗಿ ಬಾನ್(ಜರ್ಮನಿ), ಪ್ಯಾರಿಸ್(ಫ್ರಾನ್ಸ್), ವಾಶಿಂಗ್‌ಟನ್ ಡಿ.ಸಿ.(ಅಮೇರಿಕಾ)ಗಳಲ್ಲಿ ದುಡಿದಿದ್ದರು. ನಿವೃತ್ತಿ ಪೂರ್ವದಲ್ಲಿ ಇಲಸ್ಟ್ರೇಟೆಡ್ ವೀಕ್ಲಿ'ಯ ಸಂಪಾದಕರಾಗಿದ್ದರು. ನಿವೃತ್ತಿಯ ನಂತರವೂ ಪ್ರಸಾರ ಮಾಧ್ಯಮಗಳ ಬಗ್ಗೆ ಪತ್ರಿಕೆಗಳಿಗೆ ಬರೆಯುತ್ತಿದ್ದರು. ಅವರು ಮಣಿಪಾಲ ಸ್ಕೂಲ್ ಆಫ್ ಕಮ್ಯೂನಿಕೇಶನ್ ನ ಗೌರವ ನಿರ್ದೇಶಕರಾಗಿದ್ದರು.
ದೇಶದ ಸ್ವಾತಂತ್ರ್ಯ ಸಂಗ್ರಾಮವನ್ನು ಕಣ್ಣಾರೆ ಕಂಡು ವರದಿ ಮಾಡಿದ ಪತ್ರಕರ್ತರುಗಳ ಪೈಕಿ ಒಬ್ಬರಾಗಿದ್ದ ಎಂವಿಕೆ, ಅಂದಿನ ಪ್ರಮುಖ ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಸ್ವಾತಂತ್ಯ ಪೂರ್ವ ಭಾರತ ಹಾಗೂ ಸ್ವಾತಂತ್ರ್ಯೋತ್ತರ ಭಾರತದ ಪ್ರಮುಖ ಕೊಂಡಿಯಾಗಿ ನಿಂತಿದ್ದ ಎಂವಿಕೆ ಅವರ ಅಗಲುವಿಕೆ ಪತ್ರಿಕಾ ಲೋಕಕ್ಕೆ ತುಂಬಲಾರದ ನಷ್ಟ. 

Veteran journalist MV Kamath dies at 93
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com