ಕಾಳಾವರ ಷಷ್ಠಿ ಪೂರ್ವಭಾವಿ ಸಭೆ

ಕುಂದಾಪುರ: ರಾಜ್ಯದ ಎರಡನೇ ಸುಬ್ರಹ್ಮಣ್ಯ ಕ್ಷೇತ್ರವೆಂದೇ ಖ್ಯಾತವಾದ ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ ಸುಬ್ರಹ್ಮಣ್ಯ ದೇವಸ್ಥಾನದ 2014ನೇ ಚಂಪಾಷ್ಠಿ ಪೂರ್ವಭಾವಿ ಸಭೆ ಆಡಳಿತಾಧಿಕಾರಿ ನಾರಾಯಣ ಬಿಲ್ಲವ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಷಷ್ಠಿ ಉತ್ಸವ ಯಶಸ್ವಿಗೊಳಿಸಲು ಉತ್ಸವ ಸಮಿತಿ ಹಾಗೂ ಉಪ ಸಮಿತಿಗಳನ್ನು ರಚಿಸಲಾಯಿತು. ಉತ್ಸವ ಸಮಿತಿಯ ಅಧ್ಯಕ್ಷ ಪ್ರೊ|ಕೆ.ಶಂಕರರಾವ್‌ ಕಾಳಾವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಶ್ರೀನಿವಾಸ ಕಾಳಾವರ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಕೆ.ರತ್ನಾಕರ ಶೆಟ್ಟಿ, ಚಂದ್ರೆಶೇಖರ ಹೆಗ್ಡೆ, ತಾ.ಪಂ.ಸದಸ್ಯ ದೀಪಕ್‌ ಕುಮಾರ್‌ ಶೆಟ್ಟಿ, ಗ್ರಾ.ಪಂ. ಮಾಜಿ ಅಧ್ಯಕ್ಷ ರಂಜಿತ್‌ ಕುಮಾರ್‌ ಶೆಟ್ಟಿ, ಭಾಸ್ಕರ ಶೆಟ್ಟಿ, ಎನ್‌.ಸುರೇಶ್‌ ಶೆಟ್ಟಿ, ಉದಯಕುಮಾರ್‌ ಶೆಟ್ಟಿ, ಗ್ರಾ.ಪಂ.ಸದಸ್ಯ ರಾಮಚಂದ್ರ ನಾವಡ, ಬಾಬಿ ಶೆಡ್ತಿ, ಕೆ.ಕೆ.ಕಾಳಾವರ್ಕರ್‌, ಅಜಿತ್‌ ಕುಮಾರ್‌ ಶೆಟ್ಟಿ, ದಯಾನಂದ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಗಜೇಂದ್ರ ಚಾರ್ಯ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com