ಯಶಸ್ವಿ ಕಲಾವೃಂದದ ಸಾಂಸ್ಕೃತಿಕ ಪರ್ವ ಉದ್ಘಾಟನೆ

ಕುಂದಾಪುರ: ತೆಕ್ಕಟ್ಟೆ ಯಶಸ್ವಿ ಕಲಾವಂದ ಸಂಸ್ಥೆಯ ಸಾಂಸ್ಕೃತಿಕ ಪರ್ವ ಕಾರ‌್ಯಕ್ರಮ ಭಾನುವಾರ ಮಧ್ಯಾಹ್ನ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ಸಹಯೋಗದೊಂದಿಗೆ ಸ್ಥಳೀಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಜರುಗಿತು. 

ಈಟಿವಿ ಕನ್ನಡ ವಾಹಿನಿಯ ಯಶೋದೆ ಧಾರಾವಾಹಿಯ ಯಶೋದೆ ಪಾತ್ರಧಾರಿ ನೀತಾ ಅಶೋಕ್ ವೇಷಕ್ಕೆ ತುರಾಯಿ ಸಿಕ್ಕಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಒಂದು ಸಾಂಪ್ರದಾಯಿಕ ರಂಗಭೂಮಿ. ಇಲ್ಲಿ ಹೆಜ್ಜೆಗಾರಿಕೆ, ವಸ್ತ್ರಾಲಂಕಾರ, ಪಾತ್ರ ನಿರ್ವಹಣೆ ಎಲ್ಲವೂ ಹಿರಿಯರಿಂದ ಕಿರಿಯರಿಗೆ ಅನುಕರಣೆ ಮೂಲಕ ಬಂದಿರುವಂಥದ್ದಾಗಿದೆ. ಯಕ್ಷಕಲೆಯು ಉಳಿದು ಬೆಳೆಯುವಂತಾಗಬೇಕು. ಕರಾವಳಿಕಲೆ ಶ್ರೀಮಂತವಾಗಿ ಬೆಳೆಯಬೇಕು ಎಂದರು. 

ಉದ್ಯಮಿ ಆನಂದ ಸಿ.ಕುಂದರ್ ಯಶಸ್ವಿ ಕಲಾವಂದ ಕಚೇರಿ ಉದ್ಘಾಟಿಸಿ ಮಾತನಾಡಿ, ಕಲಾವಂದದ ಯಕ್ಷಸೇವೆ ನಿಜಕ್ಕೂ ಅಭಿನಂದನೆ ಅರ್ಹವಾಗಿದೆ. ಯಕ್ಷಗಾನವೆಂಬುದು ಒಂದು ಅದ್ಭುತ ಸಷ್ಟಿ. ಅದು ನಮಗೆ ಹಿರಿಯರು ಮಾಡಿಟ್ಟ ಸೊತ್ತು. ಅದನ್ನು ಸುಧಾರಣೆ ಹೆಸರಿನಲ್ಲಿ ಹಾಳು ಮಾಡುವ ಹಕ್ಕು ನಮಗಿಲ್ಲ. ಇಂದು ಹೊಸ ಪ್ರಸಂಗಗಳ ಅಬ್ಬರದಲ್ಲಿ ರಾಮಾಯಣ, ಮಹಾಭಾರತದ ಪ್ರಸಂಗಗಳು ಮೂಲೆ ಗುಂಪಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್‌ನವರು ರಾಮಾಯಣದ ಮಾಯಾಮಗ ಪ್ರಸಂಗವನ್ನು ಆಯ್ಕೆ ಮಡಿಕೊಂಡು ಪ್ರದರ್ಶನ ನೀಡಿರುವುದು ಸಂತೋಷದ ವಿಚಾರ ಎಂದರು. ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಶಂಕರ ದೇವಾಡಿಗ, ಕಲಾವಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಮತ್ತು ಭಾಗವತ ಲಂಬೋದರ ಹೆಗಡೆ ಉಪಸ್ಥಿತರಿದ್ದರು. 

ಈ ಸಂದರ್ಭ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಕ್ರೀಡಾಪಟು ಅಶೋಕ ಜಿ.ವಿ. ಅವರನ್ನು ಸನ್ಮಾನಿಸಲಾಯಿತು. ಎಂ. ಸೀತಾರಾಮ ಶೆಟ್ಟಿ ಸ್ವಾಗತಿಸಿದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು.ಕೊಕೂರು ಸೀತಾರಾಮ ಶೆಟ್ಟಿಯವರು ವಂದಿಸಿದರು. ನಂತರ ಬೆಂಗಳೂರು ಯಕ್ಷಾಂಗಣ ಟ್ರಸ್ಟ್ ವತಿಯಿಂದ ಮಾಯಾಮಗ(ಪಂಚವಟಿ) ಯಕ್ಷಗಾನ ಪ್ರದರ್ಶನಗೊಂಡಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com