2 ಸಾವಿರ ಭಕ್ತರಿಗೆ ದಾಸ ಸಂಕೀರ್ತನೆ ತರಬೇತಿ

ಉಡುಪಿ: ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ 2015ರ ಫೆ. 1ರಂದು ಬೆಳಗ್ಗೆ 9 ರಿಂದ ಸಂಜೆ 6 ರ ತನಕ ಎರಡು ಸಾವಿರ ಭಕ್ತರಿಗೆ ಏಕಕಾಲದಲ್ಲಿ ದಾಸ ಸಂಕೀರ್ತನಾ ತರಬೇತಿ ಶಿಬಿರ ನಡೆಯಲಿದೆ. ಈ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ಪೂರ್ಣಪ್ರಜ್ಞ ಅಡಿಟೋರಿಯಂ ಬಳಿಯ ನಾಧ ವೈಭವಂ ಸಂಸ್ಥೆಯಲ್ಲಿ ಉಡುಪಿ ವಾಸುದೇವ ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು. 

ಶ್ರೀಕೃಷ್ಣಮಠ, ಪರ್ಯಾಯ ಕಾಣಿಯೂರು ಮಠ, ಬೆಂಗಳೂರಿನ ಸ್ವರ ಸುರಭಿ ಟ್ರಸ್ಟ್, ಉಡುಪಿ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ, ನಾದವೈಭವಂ, ಉಡುಪಿಯ ಯು ಚಾನೆಲ್, ಸಸ್ವರ ನಾಮಾಮತ ಸಂಸ್ಥೆಯ ಆಶ್ರಯದಲ್ಲಿ ಉಡುಪಿ, ದ.ಕ. ಜಿಲ್ಲೆಯ ಭಜನಾಸಕ್ತರ ಸಹಭಾಗಿತ್ವದಲ್ಲಿ ತರಬೇತಿ ನಡೆಯಲಿದೆ. ರಾಜ್ಯದ ಹಿರಿಯ ಭಜನಾ ತರಬೇತುದಾರ ಎಮ್. ಎಸ್. ಗಿರಿಧರ್, ಬೆಂಗಳೂರಿನ ಸ್ವರ ಸುರಭಿ ಟ್ರಸ್ಟ್ ಅಧ್ಯಕ್ಷ ಶ್ರೀಧರ ಅಯ್ಯರ್ ತರಬೇತಿ ಶಿಬಿರದ ಮಾಹಿತಿ ನೀಡಿದರು. 

ಉಡುಪಿ ತಾಲೂಕು ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಮಾಧವ ಸುವರ್ಣ, ಉಪಾಧ್ಯಕ್ಷ ಭೋಜರಾಜ್ ಆರ್. ಕಿದಿಯೂರು, ಸುಪ್ರಭಾ ಆಚಾರ್ಯ, ಸಂಘಟನಾ ಕಾರ್ಯದರ್ಶಿ ಸುಂದರ ಜತ್ತನ್, ದೆಹಲಿ ಕನ್ನಡಿಗ ಪತ್ರಿಕೆಯ ಸಂಪಾದಕ ಬಾ. ಸಾಮಗ ಮಲ್ಪೆ, ಉಡುಪಿ ಚಾನೆಲ್ ನಿರ್ದೇಶಕ ಪ್ರಸಾದ್ ಎಸ್. ರಾವ್, ಸಾಹಿತಿ ಅಂಶುಮಾಲಿ ಉಡುಪಿ, ಜಯಶ್ರೀ ಶೇಟ್ ಉಡುಪಿ, ಕಷ್ಣ ಉಡುಪಿ ಉಪಸ್ಥಿತರಿದ್ದರು. ಸಸ್ವರ ನಾಮಾಮತದ ಮುಖ್ಯಸ್ಥೆ ಮಾಯಾ ಕಾಮತ್ ಮಣಿಪಾಲ ಸ್ವಾಗತಿಸಿ, ಉಡುಪಿ ತಾಲೂಕು ಭಜನಾ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ. ಶಿವಕುಮಾರ್ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com