ಜೋಡಿ ಕೊಣ ಕಳವು: ಪ್ರತಿಭಟನೆ

ಬೈಂದೂರು: ಇಲ್ಲಿನ ಕಡ್ಕೆ ಬರ್ಕಾನ್‌ಮಕ್ಕಿ ಮಾಸ್ತಿ ಗೊಂಡ ಅವರ ಮನೆಯ ಕೊಟ್ಟಿಗೆಯಲ್ಲಿ ೨೯ರ  ತಡರಾತ್ರಿ ಕಟ್ಟಿ ಹಾಕಿದ್ದ ಕೋಣವನ್ನು ಕಳವುಗೈದಿರುವುದನ್ನು ವಿರೋಧಿಸಿ ಬೈಂದೂರು ಪೋಲಿಸ್ ಠಾಣೆಯ ಎದುರು ಇಲ್ಲಿನ ವಿವಿಧ ಸಂಘಟನೆಗಳ ನೆತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.


ಕಳೆದ ನಾಲ್ಕು ದಿನಗಳ ಹಿಂದೆ ಮಾಸ್ತಿಗೊಂಡ ಎಂಬವವರು ಮನೆಯ ಕೊಟ್ಟಿಗೆಯಲ್ಲಿದ ಜೋಡಿ ಕೋಣಗಳನ್ನು ಕಳವುಗೈರಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ ಬಡ ರೈತನಿಗೆ ನ್ಯಾಯವದಗಿರಸಬೇಕು ಹಾಗೂ ಈ ಕೃತ್ಯದ ಹಿಂದಿರುವ ಜಾಲವನ್ನು ಪತ್ತೆ ಹಚ್ಚಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಗೋ ರಕ್ಷಣಾ ಸಮಿತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. 

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ಮಾತನಾಡಿ, ಬೈಂದೂರು ವ್ಯಾಪ್ತಿಯಲ್ಲಿ ರೈತರ ಕೊಟ್ಟಿಗೆಯಲ್ಲಿ ಕಟ್ಟಿದ ಗೋ ಕಳವು ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿದ್ದು, ಆರೋಪಿಗಳ ಸುಳಿವು ನೀಡಿದರು ಇಲಾಖೆ ಆರೋಪಿಗಳನ್ನು ಬಂಧಿಸಲು ಮೀನ ಮೇಷ ಎಣಿಸುತ್ತಿದೆ. ಇದರಿಂದಾಗಿ ರೈತ ವರ್ಗ ಕಂಗೆಟ್ಟಿದ್ದಾರೆ, ತಮ್ಮ ಕಷಿ ಚಟುವಟಿಕೆಗಳನ್ನು ನಡೆಸಲು ಸಾಲ ಸೂಲ ಮಾಡಿ ಕೋಣಗಳನ್ನು ಖರೀದಿಸುವ ರೈತಾಪಿ ವರ್ಗದ ಕೋಣಗಳನ್ನು ಕಟುಕರು ಕಳ್ಳತನ ಮಾಡಿರುವುದು ದುರಂತದ ಸಂಗತಿ, ಸುಮಾರು 1 ಲಕ್ಷ ರೂ. ಮೌಲ್ಯದ ಕೋಣಗಳನ್ನು ಕಳೆದುಕೊಂಡ ರೈತ ಸಂಕಷ್ಟಕ್ಕೀಡಾಗಿದ್ದಾನೆ, ಅವರಿಗೆ ಸಾಂತ್ವನ ಹೇಳಲು ನಮ್ಮ ಜನಪ್ರತಿನಿಧಿಗಳಿಗೆ ಬಿಡುವಿಲ್ಲ, ಶೀಘ್ರ ಆರೋಪಿಗಳನ್ನು ಬಂಧಿಸಿ ಆ ಬಡ ಕಷಿಕರಿಗೆ ನ್ಯಾಯ ದೊರಕಿಸಿಕೊಡಬೇಕು, ಹಾಗೂ ಇದರ ಹಿಂದಿರುವ ಜಾಲವನ್ನು ಪತ್ತೆಹಚ್ಚಬೇಕು ಎಂದು ಆಗ್ರಹಿಸಿದರು.

ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರುರಾಜ ಗಂಟಿಹೊಳೆ,  ಗೋ ಸಂರಕ್ಷಣಾ ಸಮಿತಿಯ ಅಧ್ಯಕ್ಷ ವಿನಯ ನಾಯರಿ, ಗೊ ಸಂರಕ್ಷಣಾ ಸಮಿತಿಯ ಸಂಚಾಲಕ ಶಿವರಾಜ ಶೆಟ್ಟಿ ಹುಂಚನಿ, ಜಿಲ್ಲಾ ಬಿಜೆಪಿ ಯುವಮೋರ್ಚಾದ ರಾಜೇಂದ್ರ ಎಸ್. ಬಿಜೂರು, ಬೈಂದೂರು ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಮಹೇಂದ್ರ ಪೂಜಾರಿ ನಾವುಂದ, ಪ್ರವೀಣ ಪೂಜಾರಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು. ಪ್ರತಿಭಟನೆಯ ಬಳಿಕ ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್ ಅವರಿಗೆ ಮನವಿ ಸಲ್ಲಿಸಲಾಯಿತು.  
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com