ಮೇಲ್ಸೆತುವೆ ನಿರ್ಮಾಣಕ್ಕೆ ಸಂಸದರಿಗೆ ಮನವಿ

ಬೈಂದೂರು: ಕುಂದಾಪುರ ಕಾರವಾರ ನಡುವಿನ ರಾಷ್ಟೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಪ್ರಾರಂಭವಾಗಿದ್ದು ಬೈಂದೂರು ವೃತ್ತದಲ್ಲಿ ಮೇಲ್ ಸೇತುವೆ ನಿರ್ಮಿಸುವಂತೆ ಹಾಗೂ ರೆಸ್ಟಿಂಗ್ ಯಾರ್ಡ್‌ನ್ನು ತ್ರಾಸಿಗೆ ಸ್ಥಳಾಂತರಿಸುವಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಬೈಂದೂರು ಸಂಸದ ಬಿ. ಎಸ್. ಯಡಿಯೂರಪ್ಪ ಅವರ ಮೂಲಕ ಬೈಂದೂರು ವಲಯದ ರಾಷ್ಟ್ರೀಯ ಹೆದ್ದಾರಿ 66 ನಿರ್ಮಾಣ ಜಾಗೃತ ಸಮಿತಿ, ಬೈಂದೂರು ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿರುವ ಸಂಸದ ಬಿ.ಎಸ್ ಯಡಿಯೂರಪ್ಪನವರ ನಿವಾಸಕ್ಕೆ ತೆರಳಿ ಮಾಡಿದ ಮನವಿ ಸಲ್ಲಿಸಲಾಯಿತು.

ಮನವಿಗೆ ಸ್ವೀಕರಿಸಿ ಮಾತನಾಡಿದ ಯಡಿಯೂರಪ್ಪ ದೆಹಲಿಯಲ್ಲಿ ನಡೆಯುವ ಸಂಸತ್‌ನ ಚಳಿಗಾಲದ ಅಧಿವೇಶನದ ಲ್ಲಿ ಹೆದ್ದಾರಿ ಸಚಿವ ಗಡ್ಕರಿಯವರ ಗಮನಕ್ಕೆ ತರುವುದಾಗಿ ತಿಳಿಸಿದರು.

 ತಾಲೂಕು ಕೇಂದ್ರವಾಗಲಿರುವ  ಬೈಂದೂರಿನಲ್ಲಿ  ವಾಹನ ಹಾಗೂ ಜನರ ಓಡಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ಬಹು ಉಪಯೋಗಿ ಮೇಲ್‌ಸೇತುವೆಯನ್ನು ನಿರ್ಮಿಸಿದರೆ ಊರಿನ ಅಭಿವೃದ್ದಿಗೆ ಪೂರಕವಾಗುತ್ತದೆ. ಅದರ ಜೊತೆಗೆ ಸರ್ವೀಸ್ ರಸ್ತೆಯನ್ನು ಯಡ್ತರೆ ಬೈಪಾಸ್‌ನವರೆಗೆ ನಿರ್ಮಿಸಿ ಕೊಲ್ಲೂರಿಗೆ ತೆರಳುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮಾಡಬೇಕು. ರೆಸ್ಟಿಂಗ್ ಯಾರ್ಡ್‌ನ್ನು ಈಗ ಉದ್ದೇಶಿಸಿರುವ ಮರವಂತೆಯಿಂದ ತ್ರಾಸಿ ಬೀಚ್ ಸಮೀಪ ನಿರ್ಮಿಸಬೇಕು. ಇದರಿಂದ ಈ ಭಾಗದ ಜನರಿಗೆ ಆಗುವ ತೊಂದರೆಯನ್ನು ತಪ್ಪಿಸಿದಂತಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.

ರಾಷ್ಟೀಯ ಹೆದ್ದಾರಿ 66ರ ನಿರ್ಮಾಣ ಜಾಗೃತ ಸಮಿತಿಯ ಪ್ರಧಾನ ಸಂಚಾಲಕ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಸಂಚಾಲಕರಾದ ಸದಾಶಿವ ಡಿ, ಡಾ. ಸುಬ್ರಹ್ಮಣ್ಯ ಭಟ್, ಗೋವಿಂದ ಎಂ, ತಾಪಂ ಸದಸ್ಯ ಮಹೇಂದ್ರ ಪೂಜಾರಿ, ಸಮಿತಿ ಸದಸ್ಯರಾದ ಶಿರೂರು ಗ್ರಾಪಂ ಸದಸ್ಯ ಪುಷ್ಪರಾಜ ಶೆಟ್ಟಿ, ಬೈಂದೂರು ಗ್ರಾಪಂ ಮಾಜಿ ಉಪಾಧ್ಯಕ್ಷ ವೆಂಕ್ಟ ಪೂಜಾರಿ, ಉದ್ಯಮಿ ವೆಂಕಟೇಶ ಕಿಣಿ, ನರಸಿಂಹ ನಾಯಕ್, ಬಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com