ಇಷ್ಟವಾಯ್ತು, ಮೆಚ್ಚುಗೆಗೂ ಪಾತ್ರವಾಯ್ತು ಕಾರ್ಟೂನು ಹಬ್ಬ - 14

   ಕುಂದಾಪ್ರ ಕಾರ್ಟೂನು ಹಬ್ಬದ ಎರಡೂ ದಿನ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ ಜನಸಮೂಹ ತಮ್ಮೊಳಗಿನ ಕಾರ್ಟೂನು ಪ್ರೀತಿಯನ್ನು ಸಾಕ್ಷೀಕರಿಸಿದರು. ಎರಡನೇ ದಿನ ವಿದ್ಯಾರ್ಥಿಗಳು ಹಾಗೂ ಉತ್ಸಾಹಿಗಳಿಗಾಗಿ ಕಾರ್ಟೂನು ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಮಕ್ಕಳೂ ಸೇರಿದಂತೆ ಸುಮಾರು 70ಕ್ಕೂ ಅಧಿಕ ಮಂದಿ ಭಾಗವಹಿಸಿ ವ್ಯಂಗ್ಯಚಿತ್ರ ರಚನೆಯ ಹಲವು ಸುಲಭ ವಿಧಾನಗಳನ್ನು ಸತೀಶ್‌ ಆಚಾರ್ಯ, ಜೇಮ್ಸ್‌ವಾಜ್‌, ಸಂತೋಷ್‌ ಸಸಿಹಿತ್ಲು, ರಾಮಕೃಷ್ಣ ಹೇರ್ಳೆ ಮುಂತಾದವರಿಂದ ಕಲಿತರು.
ಕಾರ್ಟೂನ್ ಮೇಸ್ಟ್ರು... ಸತೀಶ್ ಆಚಾರ್ಯ
    ನಿರೀಕ್ಷೆಗೂ ಮೀರಿ ಮಕ್ಕಳು ಕಾರ್ಟೂನು ಹಬ್ಬದಲ್ಲಿ ಪಾಲ್ಗೊಂಡಿದ್ದ ವಿಶೇಷವಾಗಿತ್ತು. ಕಾರ್ಟೂನು ಕಾರ್ಯಾಗಾರದಲ್ಲಿ ಮಾತ್ರವಲದಲದೇ ಹಬ್ಬದಲ್ಲಿ ಆಯೋಜಿಸಲಾದ ವಿವಿಧ ಸ್ವರ್ಧೆಗಳಲ್ಲಿಯೂ ಮಕ್ಕಳೂ ಉತ್ಸಾಹದಿಂದ ಭಾಗಿಯಾದದ್ದು ಕಂಡುಬಂತು. 
     ಕಾರ್ಟೂನು ಹಬ್ಬದಲ್ಲಿ ಕ್ಯಾರಿಕೇಚರ ರಚನೆಗೆ ವಿಶೇಷ ಬೇಡಿಕೆ ಇದ್ದದ್ದು ಕಂಡುಬಂತು. ಕಾರ್ಟೂನು ಕುಂದಾಪ್ರ ತಂಡ ಹಲವರ ಕ್ಯಾರಿಕೇಚರನ್ನು ಸ್ಥಳದಲ್ಲಿಯೇ ಚಿತ್ರಿಸಿ ಕೊಟ್ಟರು. ಕಾರ್ಟೂನ್ ಪ್ರೀಯರು ಕ್ಯಾನ್ವಾಸ್ ತುಂಬೆಲ್ಲಾ ಗೀಚಿ, ಸೆಲ್ಫಿ ತೆಗೆದುಕೊಂಡು, ಕಾರ್ಟೂನುಗಳಿಗೆ ಡೈಲಾಗ್ ಬರೆದು ಸಂಭ್ರಮಿಸಿದರು. ಹಿರಿಯ ಕಾರ್ಟೂನಿಷ್ಟ್ ರಾಮಕೃಷ್ಣ ಹರ್ಳೆಯವರ ನಿರೂಪಣೆ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.
    ಕಾರ್ಟೂನು ಹಬ್ಬವನ್ನು ಕಣ್ತುಂಬಿಕೊಳ್ಳಲೆಂದು ದೂರದ ಬೆಂಗಳೂರು, ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಮಂಗಳೂರು, ಮೂಡುಬಿದಿರೆ ಮುಂತಾದೆಡೆಯಿಂದ ಕಾರ್ಟೂನು ಪ್ರೀಯರು ಆಗಮಿಸಿ ಕಾರ್ಯಕ್ರಮಕ್ಕೆ ಹೊಸ ಹುರುಪು ನೀಡಿದರಲ್ಲದೇ ವಿವಿಧೆಡೆ ಕಾರ್ಟೂನು ಹಬ್ಬವನ್ನು ಆಯೋಜಿಸಲು ಆಹ್ವಾನಿಸಿದರು.
   ಕುಂದಾಪುರ ವ್ಯಂಗ್ಯಚಿತ್ರಕಾರರಾದ ಚಂದ್ರ ಗಂಗೊಳ್ಳಿ, ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ ಮೊದಲಾದವರು ಕಾರ್ಟೂನು ಹಬ್ಬದಲ್ಲಿ ಉಪಸ್ಥಿತರಿದ್ದರು.
      ಎರಡನೇ ದಿನದ ತಡರಾತ್ರಿಯವರಗೂ ಕಾರ್ಟೂನು ವೀಕ್ಷಣೆಗೆ ಜನ ಬರುತ್ತಲೇ ಇರುವುದು ಕಂಡುಬಂತು. ಒಟ್ಟಿನಲ್ಲಿ ಕುಂದಾಪುರದಲ್ಲಿ ನಡೆದ ಈ ವಿನೂತನ ಕಾರ್ಯಕ್ರಮದ ಹಾಗೂ ಸತೀಶ್ ಆಚಾರ್ಯ ನೇತೃತ್ವದ ಕಾರ್ಟೂನು ಕುಂದಾಪ್ರ ತಂಡದ ಕಾರ್ಯವೈಖರಿ ನಾಗರೀಕರ ಮೆಚ್ಚುಗ ಪಾತ್ರವಾಯಿತು.
ಕುಂದಾಪ್ರ ಕಾರ್ಟೂನು ಹಬ್ಬದ ವಿಶೇಷ ಚಿತ್ರ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕುಂದಾಪ್ರ ಕಾರ್ಟೂನು ಹಬ್ಬದ ಮೊದಲ ದಿನದ ಛಾಯಾಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕುಂದಾಪ್ರ ಕಾರ್ಟೂನು ಹಬ್ಬದ ಎರಡನೇ ದಿನದ ಛಾಯಾಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com