ಕಾರ್ಟೂನು ಹಬ್ಬ ಜೋರ್ ಇತ್ತ್... ಕಾಂಬುಕ್ ಬತ್ತಿಲ್ಯಾ?

   ಇಂದು ಕುಂದಾಪುರದವರಿಗೆ ಎರಡೆರಡು ಹಬ್ಬಗಳು. ಒಂದೆಡೆ ಕುಂದೇಶ್ವರ ದೀಪೋತ್ಸವದ ಸಂಭ್ರಮ. ಮತ್ತೊಂದೆಡೆ ಜ್ಯೂನಿಯರ್ ಕಾಲೇಜು ಕಲಾಮಂದಿರದಲ್ಲಿ ಕುಂದಾಪ್ರ ಕಾರ್ಟೂನು ಹಬ್ಬದ ಕಲರವ. ದೀಪೋತ್ಸವದಿಂದಾಗಿ ಕುಂದಾಪುರದ ನಗರವೇ ಸಿಂಗಾರಗೊಂಡಿದ್ದರೇ, ಕಾರ್ಟೂನ್ ಹಬ್ಬ ಕಲಾಮಂದಿರಲ್ಲಿ ಒಂದು ವಿಶಿಷ್ಟಲೋಕವನ್ನೇ ತೆರೆದಿಟ್ಟಿದೆ. 
   ಕಲಾಮಂದಿರದ ಎದುರಿಗೇ ನಿಂತ ವಿರಾಟ್ ಕೊಹ್ಲಿ, ಸಚಿನ್ ತಂಡೂಲ್ಕರ್, ಶಾರುಖ್ ನಿಮ್ಮನ್ನು ಕಾರ್ಟೂನು ಹಬ್ಬಕ್ಕೆ ಬರಮಾಡಿಕೊಂಡರೇ, ಒಳಗಡೆ ಅಣ್ಣ ಹಜಾರೆ, ವಿವಿಧ ರಾಜಕಾರಣಿಗಳು, ನಟರು, ಕ್ರಿಕೆಟಿಗರು ಮುಂತಾದವರ ವಿವಿಧ ಕಾರ್ಟೂನುಗಳ ಪ್ರದರ್ಶನ ನಿಮ್ಮನ್ನು ಪುಳಕಿತರಾಗುವಂತೆ ಮಾಡುತ್ತದೆ.

ಕಾರ್ಟೂನ್ ಕುಂದಾಪ್ರ ಸಂಸ್ಥೆ ಪ್ರಥಮ ಬಾರಿಗೆ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ವಿಭಿನ್ನ ಹಾಗೂ ಅಚ್ಚುಕಟ್ಟಾಗಿ ಮೂಡಿಬಂದಿದೆ. 


 ಮಕ್ಕಳ ಮುಗ್ಧತೆಯನ್ನು ಕಾಪಾಡೋಣ, ಲಂಚಾಸುರನಿಗೆ ತುತ್ತು ತಿನ್ನಿಸಬೇಡಿ, ನೀವು ಮದ್ಯಪಾನರಾದಾಗ ಸೈತಾನ ಡ್ರೈವ್ ಮಾಡ್ತಾನೆ, ಚುಡಾಯಿಸೋದು ಪುರಷತ್ವವಲ್ಲ-ಹೇಡಿತನ ಹೀಗೆ ಹತ್ತು ಹಲವು ಸಾಮಾಜಿಕ ಕಳಕಳಿಯ ಕಾರ್ಟೂನುಗಳುಗಳು ಸತೀಶ್ ಆಚಾರ್ಯ ಅವರ ಕುಂಚದಿಂದ ಒಂದೆಡೆ ಮೂಡಿ ಬಂದಿದ್ದರೇ, ನಾಡಿನ ಪ್ರಖ್ಯಾತ ಪತ್ರಿಕೆ, ವೆಬ್ಸೈಟ್ ಗಳಲ್ಲಿ ಪ್ರಕಟವಾದ ಕುಂದಾಪುರ ಮೂಲದವರ ವಿವಿಧ ಕಾರ್ಟೂನುಗಳು ಇಲ್ಲಿ ಅನಾವರಣಗೊಂಡಿದೆ. 

 ಚಿತ್ರಮಿತ್ರ ಅಂದ ಹಾಗೆ ಸತೀಶ್ ಆಚಾರ್ಯ ಅವರೊಂದಿಗೆ ಕಾರ್ಟೂನಿಷ್ಟಗಳಾದ ಜಯರಾಮ ಉಡುಪ, ಕೇಶವ ಸಸಿಹಿತ್ಲು, ಚಂದ್ರಶೇಖರ ಶೆಟ್ಟಿ, ರಾಮಕೃಷ್ಣ ಹರ್ಳೆ, ದಿನೇಶ್ ಹೊಳ್ಳ, ಸುರೇಶ್ ಕೋಟ, ಸುಬ್ರಮಣ್ಯ ಮೇಗರವಳ್ಳಿ  ಗಣೇಶ್ ಹೆಬ್ಬಾರ್, ಮುಂತಾದವರು ಸೇರಿಕೊಂಡಿದ್ದರೇ, ಖ್ಯಾತ ಚಿತ್ರಕಾರ ಚಿತ್ರಮಿತ್ರ ವಿಶೇಷ ಆಕರ್ಷಣೆಯಾಗಿ ಕಂಡುಬಂದರು.
   ಕಾರ್ಟೂನ್ ಹಬ್ಬದಲ್ಲಿ ಆಯೋಜಿಸಿರುವ ನೀವೂ ಡೈಲಾಗ್ ಹೊಡೀರಿ, ನಿವೂ ಕ್ಯಾರಿಕೇಚರ್ ಬಿಡಿಸಿ, ಸೆಲ್ಫಿ ತೆಗೆದುಕೊಳ್ಳಿ ಮುಂತಾದ ಸ್ವರ್ಧೆಗಳು, ಸ್ಥಳದಲ್ಲಿ ನಿಮ್ಮ ಕ್ಯಾರಿಕೇಷರ್, ಕಾರ್ಟೂನಿಷ್ಟ್ ಕ್ಯಾನ್ವಾಸ್, ನಿಮಗಾಗಿ ಓಪನ್ ಕ್ಯಾನ್ವಾಸ್ , ಕಾರ್ಟೂನ್ ಪುಸ್ತಕ ಮುಂತಾದವುಗಳು ಕಾರ್ಟೂನ್ ಪ್ರೀಯರನ್ನು ಸೆಳೆಯುವಂತೆ ಮಾಡಿದೆ.
     ಮಕ್ಕಳು, ವಿದ್ಯಾರ್ಥಿಗಳು, ಕಾರ್ಟೂನ್ ಪ್ರೀಯರು ತಂಡೋಪತಂಡವಾಗಿ ಹಬ್ಬದಲ್ಲಿ ಭಾಗವಹಿಸುತ್ತಿದ್ದಾರೆ.   ನೀವು ಮಿಸ್ ಮಾಡಿಕೊಳ್ಳಲು ಕಾರಣವೇ ಇಲ್ಲದ ಒಂದು ವಿಶಿಷ್ಟ ಹಬ್ಬಕ್ಕೆ ಸಂಭ್ರಮಿಸಲು ಮರೆಯದೇ ಬನ್ನಿ.

ಕುಂದಾಪ್ರ ಕಾರ್ಟೂನು ಹಬ್ಬದ ವಿಶೇಷ ಚಿತ್ರ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕುಂದಾಪ್ರ ಕಾರ್ಟೂನು ಹಬ್ಬದ ಮೊದಲ ದಿನದ ಛಾಯಾಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕುಂದಾಪ್ರ ಕಾರ್ಟೂನು ಹಬ್ಬದ ವಿಶೇಷ ಚಿತ್ರ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕುಂದಾಪ್ರ ಕಾರ್ಟೂನು ಹಬ್ಬದ ಎರಡನೇ ದಿನದ ಛಾಯಾಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com