ಕಾವ್ಯದ ರೂಪಾಂತರವೇ ರಂಗಭೂಮಿ: ಶ್ರೀಪಾದ್‌ ಭಟ್‌

ಕುಂದಾಪುರ: ಕಾವ್ಯ ಮತ್ತು ರಂಗಭೂಮಿ ಬೇರೆಯಲ್ಲ. ಕಾವ್ಯದ ರೂಪಾಂತರವೇ ರಂಗಭೂಮಿ. ಇದನ್ನು ನಾವು ಹಲವಾರು ಕಾಲದಿಂದ ಹಲವಾರು ವಿದ್ಯಾಮಾನಗಳ ಮೂಲಕ ಕೇಳಿದ್ದೇವೆ ಎಂದು ರಂಕಕರ್ಮಿ ಡಾ|ಶ್ರೀಪಾದ ಭಟ್‌ ಹೇಳಿದರು.
     ಅವರು ಕುಂದಾಪುರ ಕಲಾಮಂದಿರದಲ್ಲಿ ಕನ್ನಡ ವೇದಿಕೆ ಕುಂದಾಪುರ ಇವರ ಆಶ್ರಯದಲ್ಲಿ ನಡೆದ ಕನ್ನಡ ಮಾಸಾಚರಣೆಯ ಡಿಂಡಿಮ ಕಾರ್ಯಕ್ರಮದಲ್ಲಿ ಕನ್ನಡ ಕಾವ್ಯ ಮತ್ತು ರಂಗಸಾಧ್ಯತೆಗಳು ಎಂಬ ವಿಷಯದ ಬಗ್ಗೆ ಹಮ್ಮಿಕೊಂಡ ಮಾತುಕತೆಯಲ್ಲಿ ಅವರು ಪ್ರಮುಖ ಭಾಷಣಕಾರರಾಗಿ ಮಾತನಾಡಿದರು.
    ಒಮದು ಕಾಲದಲ್ಲಿ ಕಾವ್ಯ ಹಾಗೂ ಬದುಕು ಜೊತೆ ಜೊತೆಯಾಗಿ ಬೆಳೆದವು. ಆದರೆ ಸಮಾಜ ವಿಘಟನೆ ಯಾದಾಗ ಇವು ಬೇರೆಯಾದವು.ಆದರೆ ಎರಡರ ಗುರಿ ಯಾಗೂ ಒಟ್ಟು ಸಾಧ್ಯತೆಗಳು ಒಂದೇ ಆಗಿದ್ದವು. ಕಾವ್ಯದ ರೂಪಾಂತರ ಒಂದು ಅದ್ಭುತ ಸಾಧನೆ ಎಂದರು.
    ಸಾಹಿತಿ ಡಾ|ವಿಠಲ ಭಂಡಾರಿ ಕೆರೆಕೋಣ ಅವರು ಮಾತನಾಡಿ, ಅಮೂರ್ತಕ್ಕೆ ಮೂರ್ತ ರೂಪ ನೀಡುವುದೇ ಕಾವ್ಯ. ಹುಡಕುವಿಕೆಯಿಂದ ಕಾವ್ಯದ ನೈಜತೆ ಅರ್ಥವಾಗುವುದಿಲ್ಲ. ಹೊರಗಡೆ ಅರಸುವ ಬದಲು ಅನ್ನು ಒಳಗಡೆ ಅರಸುವಿಕೆ ಮಾಡಿದಾಗ ಕಾವ್ಯದ ಅದ್ಭುತ ಶಕ್ತಿ ಅನಾವರಣಗೊಳ್ಳುತ್ತದೆ ಎಂದರು.
     ರಂಗಕರ್ಮಿ ಅಭಿಲಾಷಾ ಈ ಮತುಕತೆಯ ಸಮನ್ವಯಗಾರರಾಗಿದ್ದರು. ಕನ್ನಡ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವನಾಥ ಕರಬ ಕಾರ್ಯಕ್ರಮ ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com