ಮೊದಲ ಬಾರಿಗೆ ಜಂಬೂ ನದಿ ತೀರದಲ್ಲಿ ಗಂಗಾರತಿ

ಕುಂದಾಪುರ: ತಾಲೂಕಿನ ಜಪ್ತಿ ಗ್ರಾಮದ ಜಂಬೂನದಿ ತೀರ ಅಪೂರ್ವ ವಿದ್ಯಾಮಾನಕ್ಕೊಂದು ಸಾಕ್ಷಿಯಾಯಿತು. ತಾಲೂಕಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಉತ್ತರ ಭಾರತದ ಮಾದರಿಯಲ್ಲಿ ಗಂಗಾರತಿ ಎಂಬ ವಿಶೇಷ ಪೂಜಾ ಕಾರ್ಯಕ್ರಮ ಸಂಪನ್ನಗೊಂಡಿತು. ಸಂಜೆ 5.30ರಿಂದ 7.30ರ ತನಕ ವಿದ್ವಾಂಸರು, ಋತ್ವಿಜರ ನೇತತ್ವದಲ್ಲಿ ಜಂಬೂ ನದಿ ತೀರದ ಜಂಬೂಕೇಶ್ವರ ದೇವಸ್ಥಾನದ ಭಾಗೀರಥಿ ಘಾಟ್‌ನಲ್ಲಿ ಗಂಗಾಮಾತೆಗೆ ಪೂಜೆ ಸಲ್ಲಿಸಲಾಯಿತು. 

ವೇದಮೂರ್ತಿ ಚೆನ್ನಕೇಶವ ಭಟ್, ವೇದಮೂರ್ತಿ ರಂಗನಾಥ ಭಾಗವತ ಮತ್ತು ಇನ್ನಿತರ ಋತ್ವಿಜರು ಗಂಗಾ ಕಲ್ಪೋಕ್ತ ಪೂಜೆಯನ್ನು ಶಾಸ್ತ್ರಾನುಸಾರ ನೆರವೇರಿಸಿದರು. ಭಾಗೀರಥಿ (ಗಂಗೆ) ಮಾತೆಯನ್ನು ವಿಧಿಪೂರ್ವಕ ಆಹ್ವಾನಿಸಿ ಮಂಗಳಾರತಿ ಬೆಳಗಲಾಯಿತು. ಬಳಿಕ ಜಂಬೂ ನದಿಯಲ್ಲಿ ನೂರಾರು ಭಕ್ತರು ದೀಪ ಬೆಳಗಿಸಿ ಕತಾರ್ಥರಾದರು. ಈ ಮೊದಲು ಜಂಬೂಕೇಶ್ವರ ದೇವರಿಗೆ ಸಹಸ್ರ ಬಿಲ್ವಾರ್ಚನೆ ಇತ್ಯಾದಿ ಪೂಜೆ ನಡೆಸಲಾಯಿತು. 

ಡಾ.ಬಿ.ವಿ.ಉಡುಪ ಗಂಗಾರತಿ ಕಾರ್ಯಕ್ರಮದ ನೇತತ್ವ ವಹಿಸಿದ್ದರು. ಕೊಲ್ಲೂರು ದೇವಳದ ಮಾಜಿ ಆಡಳಿತ ಮೊಕ್ತೇಸರ ಬಿ.ಎಂ.ಸುಕುಮಾರ ಶೆಟ್ಟಿ, ಉದ್ಯಮಿ ಸುರೇಶ್ ಕಾಮತ್, ಗೋರಕ್ಷಾ ಸಮಿತಿಯ ಪ್ರಮುಖ ರಘುವೀರ್ ನಗರಕರ್ ಮೊದಲಾದವರು ಉಪಸ್ಥಿತರಿದ್ದರು. ಗಂಗಾರತಿಗೋಸ್ಕರ ದೇವಳ ಪರಿಸರ ಹಾಗೂ ನದಿಪಾತ್ರದಲ್ಲಿ ವಿಶೇಷ ದೀಪಾಲಂಕಾರ ನಡೆಸಲಾಗಿತ್ತು. ಜಂಬೂನದಿ ದೀಪಾರಾಧನೆಯಿಂದ ಕಂಗೊಳಿಸಿತು. ಅಸಂಖ್ಯ ಭಕ್ತರು ಮನದುಂಬಿಕೊಂಡರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com