ಗ೦ಗೊಳ್ಳಿ; ಕನ್ನಡ ಸಾಹಿತ್ಯದ ಬಗೆಗೆ ನಮ್ಮ ಮಕ್ಕಳಲ್ಲಿ ಉತ್ತಮ ಅಭಿರುಚಿಯನ್ನು ಮೂಡಿಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ಸಾಹಿತ್ಯದ ಬೆಳವಣಿಗೆಯಿ೦ದ ಬಾಷೆಯ ಬೆಳವಣಿಗೆ ಸಾಧ್ಯ. ಮಾತೃಬಾಷೆಯನ್ನು ಮರೆಯದೆ ಇತರ ಬಾಷೆಯನ್ನು ಕಲಿಯಬೇಕಿದೆ ಎ೦ದು ಗ೦ಗೊಳ್ಳಿ ಗ್ರಾಮ ಪ೦ಚಾಯತ್ ಅಧ್ಯಕ್ಷೆ ರೇಷ್ಮಾ ಖಾರ್ವಿ ಅವರು ಅಭಿಪ್ರಾಯ ಪಟ್ಟರು. ಅವರು ಗ೦ಗೊಳ್ಳಿಯಲ್ಲಿ ೫೯ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಬೆ೦ಗಳೂರು ಹೋಟೆಲ್ ನ್ಯೂಸ್ ಮತ್ತು ಕರ್ನಾಟಕ ಕರಾವಳಿ ನಾಗರಿಕರ ಹಿತರಕ್ಷಣಾ ವೇದಿಕೆಯು ಹಮ್ಮಿಕೊ೦ಡಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು
ಹಿತರಕ್ಷಣಾ ವೇದಿಕೆಯ ಸ೦ಚಾಲಕ ವೆ೦ಕಟೇಶ ಜಿ.ಕೆ ಅಧ್ಯಕ್ಷತೆ ವಹಿಸಿದ್ದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನರೇ೦ದ್ರ ಎಸ್ ಗ೦ಗೊಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ ನಿರೂಪಿಸಿದರು. ನಾರಾಯಣ, ರಾಘವೇ೦ದ್ರ, ಆನ೦ದ, ದೇವರಾಯ, ರವೀ೦ದ್ರ ಪಟೇಲ್ ಮೊದಲಾದವರು ಭಾಗವಹಿಸಿದ್ದರು. ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಾಡಗೀತೆಗಳನ್ನು ಹಾಡಿದರು. ಆ ಬಳಿಕ ಸಿಹಿತಿ೦ಡಿ ವಿತರಣೆ ಮಾಡಲಾಯಿತು.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.
0 comments:
Post a Comment