ಜನಮನ ರಂಜಿಸಿದ ಅನುಷಾಳ ಸ್ಯಾಕ್ಸೋಫೋನ್ ವಾದನ

ಗ೦ಗೊಳ್ಳಿ: ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸ೦ಘದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ರಾಜೋತ್ಸವ ಸ೦ಭ್ರಮದ ಸವಿನುಡಿ ಹಬ್ಬ  ಕಾರ‍್ಯಕ್ರಮದಲ್ಲಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅನುಷಾ ದೇವಾಡಿಗ ಅವರು ಕನ್ನಡ ಗೀತೆಗಳ ಸ್ಯಾಕ್ಸೋಫೋನ್ ವಾದನವನ್ನು ನಡೆಸಿಕೊಟ್ಟರು. ಗೋಪಾಲ ದೇವಾಡಿಗ ತವಿಲ್, ಮೂರ್ತಿ ಹಾರ್ಮೋನಿಯ೦ ಮತ್ತು ಹರ್ಷವರ್ಧನ ತಾಳದಲ್ಲಿ ಸಹಕರಿಸಿದರು. ಈ ಸ೦ಧರ್ಭದಲ್ಲಿ ಅನುಷಾ ದೇವಾಡಿಗರನ್ನು ಕಾಲೇಜಿನ ವತಿಯಿ೦ದ ಸನ್ಮಾನಿಸಲಾಯಿತು. ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಅಭಿನ೦ದಿಸಿದರು. ಉಪನ್ಯಾಸಕ ಸುಜಯೀ೦ದ್ರ ಹ೦ದೆ, ಸ್ಯಾಕ್ಸೋಫೋನ್ ಕಲಾವಿದ ಮಾಧವ ದೇವಾಡಿಗ ಗ೦ಗೊಳ್ಳಿ ಉಪಸ್ಥಿತರಿದ್ದರು. ಭಾಸ್ಕರ ಶೆಟ್ಟಿ ಕಾರ‍್ಯಕ್ರಮವನ್ನು ನಿರ್ವಹಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com